ಕರ್ನಾಟಕದ ಜನತೆಗೆ ಭರವಸೆ ನೀಡಿದ 5 ಗ್ಯಾರಂಟಿ ಯೋಜನೆ ಜಾರಿ: ಖರ್ಗೆ

ನವದೆಹಲಿ: ಕರ್ನಾಟಕದ ಜನತೆಗೆ ಭರವಸೆ ನೀಡಿದ ಐದು ಗ್ಯಾರಂಟಿ ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ ಮಾಡಿದ್ದಾರೆ.

ಖರ್ಗೆ ಅವರು ಟ್ವೀಟ್ ಮೂಲಕ ಕರ್ನಾಟಕದ ಜನತೆಗೆ ಪ್ರಗತಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು ಟೀಂ ಕಾಂಗ್ರೆಸ್ ಬದ್ಧವಾಗಿದೆ. 6.5ಕೋಟಿ ಕನ್ನಡಿಗರಿಗೆ ಭರವಸೆ ನೀಡಿದ ಐದು ಗ್ಯಾರಂಟಿಗಳನ್ನು ನಾವು ಜಾರಿಗೊಳಿಸುತ್ತೇವೆʼ ಎಂದಿದ್ದಾರೆ. ಆ ಮೂಲಕ ಸಿದ್ದು, ಡಿಕೆಶಿ ಮತ್ತು ಖರ್ಗೆ ಏಕಕಾಲಕ್ಕೆ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇದೆ ಎನ್ನುವ ಸಂದೇಶ ರವಾನಿಸಿದ್ದಾರೆ.

ಇನ್ನು ಎಐಸಿಸಿ ಅಧ್ಯಕ್ಷ ಖರ್ಗೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆ ಮಾಡಿದ್ದು, ಮೇ 20 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.