ಉಡುಪಿ: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುರುವಾರದಿಂದ ಉತ್ತಮ ಮಳೆಯಾಗುತ್ತಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮಳೆರಾಯ ಇದೀಗ ಸ್ವಲ್ಪ ಕೃಪೆ ತೋರಿದ್ದು ಕೃಷಿ ಚಟುವಟಿಕೆಗಳು ಮತ್ತೆ ಪುಟಿದೆದ್ದಿವೆ.
ಹೊನ್ನಾವರ ತಾಲೂಕಿನಲ್ಲಿ ಗರಿಷ್ಠ 110 ಮಿಮಿ ಮಳೆಯಾಗಿದ್ದರೆ ಕುಮಟಾದಲ್ಲಿ 96 ಮಿಮಿ ಮತ್ತು ಭಟ್ಕಳದಲ್ಲಿ 86 ಮಿಮಿ ಮಳೆಯಾಗಿದೆ. ಆದಾಗ್ಯೂ, ಮಳೆಯ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿಲ್ಲದೆ ಕುಸಿತವನ್ನು ದಾಖಲಿಸಿದೆ.
ಬುಧವಾರದವರೆಗೂ ಕರಾವಳಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಹಿತ ಭಾರೀ (115 ರಿಂದ 244 ಮಿಮಿ) ಮಳೆಯ ಸಂಭಾವನೆ ಇದ್ದು, ಸಮುದ್ರವೂ ಪ್ರಕ್ಷುಬ್ದವಾಗಲಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ