ಕಾರ್ಕಳ: ಶಾಂಭವಿ ನದಿಯಲ್ಲಿ ಎಗ್ಗಿಲ್ಲದೇ ನಡಿತಿದೆ ಅಕ್ರಮ ಮರಳು ದಂಧೆ:ಪ್ರಭಾವಿ ವ್ಯಕ್ತಿಗಳು ಶಾಮೀಲು?

ಕಾರ್ಕಳ: ಎಲ್ಲೆಡೆ ಕೊರೋನಾ ಹಾಹಾಕಾರ ಜಾಸ್ತಿಯಾಗಿದೆ.ವೀಕೆಂಡ್ ಲಾಕ್ ಡೌನ್ ನಿಂದ ಚಟುವಟಿಕೆಗಳೆಲ್ಲಾ ಸ್ತಬ್ಧವಾಗಿದೆ.

ಈ ದುರಿತ ಕಾಲದಲ್ಲೇ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಶಾಂಭವಿ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ.ಇವೆಲ್ಲಾ ಕಣ್ಣಿಗೆ ಕಾಣುತ್ತಿದ್ದರೂ  ಇಲಾಖಾಧಿಕಾರಿಗಳು ಬಾಯಿಗೆ ಬೀಗ ಜಡಿದು ಕೂತ ಹಾಗಿದೆ.

ಸಂಕಲಕರಿಯದ ಉಗ್ಗೆದಬೆಟ್ಟುವಿನ ನದಿ ದಡದಲ್ಲಿ ಮತ್ತು ಮುಂಡ್ಕೂರು ಉಳೆಪಾಡಿಯ ಕಿಂಡಿ ಅಣೆಕಟ್ಟುವಿನ ಬದಿಯಲ್ಲಿ ಮಾತ್ರ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಯಾವುದೇ ಇಲಾಖೆಯು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲದಿರುವುದು ದುರಂತ.

ಪ್ರಭಾವಿ ವ್ಯಕ್ತಿಗಳ ಸಾಥ್ ಇದ್ಯಾ?

ಇಲ್ಲಿ ಗ್ರಾಮ ಪಂಚಾಯತ್ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ   ರಾಜಕೀಯ ಪ್ರಭಾವಿ ವ್ಯಕ್ತಿಗಳು ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ಕೇಳಿಬರುತ್ತಿರುವ ಆರೋಪ.

ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆ ಇದರ ಬಗ್ಗೆ ಗಮನ ಹರಿಸಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.