ಕಾರ್ಕಳ: ಪುರಸಭೆ ವ್ಯಾಪ್ತಿಯ ಆನೆಕರೆ ಪಾಕ್೯ ಸಮೀಪದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಆನೆಕರೆ ಜಾಗವನ್ನು ಒತ್ತುವರಿಗೊಳಿಸಿ ರಾತ್ರೋ ರಾತ್ರಿ ಆಕ್ರಮ ಕಟ್ಟಡವೊಂದು ತಲೆ ಎತ್ತಿದೆ.
ಈ ಬಗ್ಗೆ ಪುರಸಭಾ ಅಧ್ಯಕ್ಷೆ ಹಾಗೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಕಾರ್ಕಳ ಶಾಸಕರ ನೇತೃತ್ವದಲ್ಲಿ ಲಕ್ಷ ಗಟ್ಟಲೆ ಹಣವನ್ನು ಖರ್ಚು ಮಾಡಿ ಕೆರೆಯ ಹೂಳು ಎತ್ತಲಾಗಿತ್ತು. ಇದೇ ಸಂದರ್ಭದಲ್ಲಿ ಕೆರೆಯ ಸುತ್ತಲೂ ತಡೆಬೇಲಿಯನ್ನು ನಿರ್ಮಿಸಿ ಕೆರೆಯ ಸಂರಕ್ಷಣಾ ಕಾರ್ಯವನ್ನು ನಡೆಲಾಗಿತ್ತು.ಆದರೆ ಇದೀಗ ಕೆರೆಯನ್ನು ಒತ್ತುವರಿಗೊಳಿಸಿ ಕಟ್ಟಡ ನಿರ್ಮಾಣವಾಗುತ್ತಿದ್ದು ಇದಕ್ಕೆ ಪುರಸಭಾ ಸದಸ್ಯರು ತೀವ್ರ ಆಕ್ಷೇಪ ಸಲ್ಲಿಸಿದ್ದಾರೆ. ಸ್ಥಳಕ್ಕೆ ತೆರೆಳಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಕೆರೆ ಒತ್ತುವರಿ ಜಾಗದಲ್ಲಿ ಮಳಿಗೆ ಮಾಡೋ ಪ್ಲಾನ್:
ಸದಸ್ಯರ ಗದ್ದಲ ಜೋರಾಗುತ್ತಿದ್ದಂತೆ ಈ ಸ್ಥಳವನ್ನು ನಂದಿನಿ ಕ್ಷೀರ ಮಳಿಗೆಗೆ ನೀಡಲಾಗಿರುವುದು ಬೆಳಕಿಗೆ ಬಂದಿದೆ. ಅಧ್ಯಕ್ಷೆಯ ವೈಯಕ್ತಿಕ ಆಸಕ್ತಿಯಿಂದ ಕೆರೆ ಒತ್ತುವರಿಗೊಳಿಸಿ ಕಟ್ಟಡ ರಚನೆಯ ಕುರಿತು ಸದಸ್ಯ ಶುಭದ್ ರಾವ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕೆರೆ ಒತ್ತುವರಿಗೊಳಿಸಿ ಕಟ್ಟಡ ರಚನೆಯಾಗಿರುವ ಬಗ್ಗೆ ಪರಿಸರವಾದಿಗಳು ಹಾಗೂ ಪ್ರಜ್ಞಾವಂತ ನಾಗರೀಕರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಾನೂನಾತ್ಮಕವಾಗಿ ಪುರಸಭೆಯಿಂದ ಪರವಾನಿಗೆ ಪಡೆದು ಲಕ್ಷಗಟ್ಟಲೆ ಶುಲ್ಕ ಪಾವತಿಸಿ ಕಟ್ಟಡ ರಚನೆ ವೇಳೆ ಅಧ್ಯಕ್ಷರು ಸ್ವತ ಅಕ್ರಮ ಕಟ್ಟಡ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಇದೀಗ ಅವರು ತಮ್ಮ ಅಧಿಕಾರ ದುರುಪಯೋಗಗೊಳಿಸಿ ಕೆರೆ ಒತ್ತುವರಿ ಕಟ್ಟಡ ರಚನೆಗೆ ಸಹಕಾರ ನೀಡಿರುವುದು ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.