ಉಡುಪಿ:ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅನ್ನಪೂರ್ಣ ಶೆಣೈ ಇವರಿಗೆ ಐಇಇಇ ಘಟಕ ಬೆಂಗಳೂರು ವಿಭಾಗದಿಂದ ಉತ್ತಮ ವಿದ್ಯಾರ್ಥಿ ಸ್ವಯಂ ಸೇವಕಿ
ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ದಿನಾಂಕ 18 ಜನವರಿ 2026 ರಂದು ಬೆಂಗಳೂರಿನಲ್ಲಿ ಆಯೋಜಿಸಲಾದ ಐಇಇಇ ಬೆಂಗಳೂರು ವಿಭಾಗದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೀಡಲಾಯಿತು.
ಈ ಪ್ರಶಸ್ತಿಯು ಅನ್ನಪೂರ್ಣ ಶೆಣೈ ಇವರು ಐಇಇಇ ಘಟಕದ ವಿದ್ಯಾರ್ಥಿ ಚಟುವಟಿಕೆಯನ್ನು ಬಲಪಡಿಸುವಲ್ಲಿ ತೋರಿದ ನಾಯಕತ್ವ, ಸಮರ್ಪಣೆ ಹಾಗೂ ನಿರಂತರ ಸೇವೆ ಮತ್ತು ತಾಂತ್ರಿಕ ಕಾರ್ಯಾಗಾರಗಳು, ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳು, ಸದಸ್ಯತ್ವ ಉಪಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದಕ್ಕಾಗಿ ದೊರೆತಿದೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯವರು ಮತ್ತು ಪ್ರಾಂಶುಪಾಲರು ಅಭಿನಂದನೆ ವ್ಯಕ್ತ ಪಡಿಸಿರುತ್ತಾರೆ.
















