ICC WTC Final: 200 ಒಳಗೆ ಆಸಿಸ್ ಕಟ್ಟಿಹಾಕಿದಲ್ಲಿ ಭಾರತಕ್ಕೆ ಗೆಲುವು ಸನಿಹ

ಓವೆಲ್ (ಲಂಡನ್):ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತನ್ನ ಹಿಡಿತ ಬಲಪಡಿಸಿಕೊಂಡಿದೆ. ಆದರೆ ಬೌಲರ್‌ಗಳು ಇಂದು 200 ರೊಳಗೆ ಆಸ್ಟ್ರೇಲಿಯಾವನ್ನು ಕಟ್ಟಿಹಾಕಿದಲ್ಲಿ ಭಾರತಕ್ಕೆ ಗೆಲುವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ನ ಅಂತಿಮ ಪಂದ್ಯದಲ್ಲಿ, ಮೊದಲ ಇನಿಂಗ್ಸ್‌ನಲ್ಲಿ 173 ರನ್ಗಳ ಬೃಹತ್ ಮುನ್ನಡೆ ಪಡೆದುಕೊಂಡು ಆಸ್ಟ್ರೇಲಿಯಾ ಭಾರತವನ್ನು ಆಲ್ಔಟ್ ಮಾಡಿದೆ. ಮೊದಲ ಇನ್ನಿಂಗ್ಸ್ ಬೃಹತ್ ರನ್ನಿಂದ ಬಹುತೇಕರ ಅಭಿಪ್ರಾಯದಲ್ಲಿ ಭಾರತಕ್ಕೆ ಗೆಲುವು ದೂರದ ಮಾತಾಗಿತ್ತು. ಆದರೆ, ಮೂರನೇ ದಿನ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಾಡಿದ ಕಮ್ಬ್ಯಾಕ್ನಿಂದ ಗೆಲುವಿನ ಸಾಧ್ಯತೆ ಚಿಗುರೊಡೆಯುತ್ತಿದೆ.

ಮೂರನೇ ದಿನದ ಆಟದ ಅಂತ್ಯಕ್ಕೆ ಆಸ್ಟ್ರೇಲಿಯಾ 123 ರನ್ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಇದರಿಂದ ಆಸಿಸ್ 296 ರನ್ನ ಲೀಡ್ ಪಡೆದುಕೊಂಡಿದೆ. ಇಂದು ಭಾರತ ಕಾಂಗರೂ ಪಡೆಯ ಉಳಿದ 6 ವಿಕೆಟ್ಗಳನ್ನು ಬೇಗ ಉರುಳಿಸಿದರೆ ಗೆಲುವಿನ ಸಾಧ್ಯತೆಗಳು ಹೆಚ್ಚಿವೆ. ಪಿಚ್ನ ಬಗ್ಗೆ ಇರುವ ವಿಮರ್ಶೆಯಂತೆ ನಾಲ್ಕು ಮತ್ತು ಐದನೇ ದಿನ ಸ್ಪಿನ್ ಬೌಲ್ಗೆ ಹೆಚ್ಚು ಸಹಕಾರವಾಗಲಿದೆ. ಅದರಂತೆ ಇಂದು ಜಡೇಜಾ ಮತ್ತೆ ಕಮಾಲ್ ಮಾಡುವ ನಿರೀಕ್ಷೆ ಹುಟ್ಟಿ ಹಾಕಿದೆ. ಪ್ರಸ್ತುತ, ಕ್ಯಾಮರೂನ್ ಗ್ರೀನ್ 7 ಮತ್ತು ಮಾರ್ನಸ್ ಲಬುಶೆನ್ 41 ರನ್ ಗಳಿಸಿ ಅಜೇಯರಾಗಿದ್ದಾರೆ. ಇದೀಗ ನಾಲ್ಕನೇ ದಿನವಾದ ಶನಿವಾರ ಆಸ್ಟ್ರೇಲಿಯಾವನ್ನು ಆದಷ್ಟು ಬೇಗ ಕವರ್ ಮಾಡಲು ಭಾರತ ತಂಡ ಪ್ರಯತ್ನಿಸಲಿದೆ.

ಭಾರತಕ್ಕಿರುವ ಅವಕಾಶ : ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಭಾರತದ ವಿರುದ್ಧ 296 ರನ್ಗಳ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ಆಧಾರದಲ್ಲಿ 173 ರನ್ ಗಳ ಮುನ್ನಡೆಯಿಂದಾಗಿ ಆಸ್ಟ್ರೇಲಿಯಾಕ್ಕೆ ಸ್ವಲ್ಪ ಲಾಭವಾಗಿದೆ. ಆದರೆ, ಭಾರತದ ಬ್ಯಾಟ್ಸ್‌ಮನ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಸಂಪೂರ್ಣ ಶಕ್ತಿಯನ್ನು ಪ್ರದರ್ಶಿಸಬೇಕು ಮತ್ತು ಮೊದಲ ಇನ್ನಿಂಗ್ಸ್ ತಪ್ಪನ್ನು ಪುನರಾವರ್ತಿಸುವುದನ್ನು ತಪ್ಪಿಸಬೇಕು. ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿ ಭಾರತ ತಂಡವು 200 ರೊಳಗೆ ಆಸ್ಟ್ರೇಲಿಯಾವನ್ನು ಕವರ್ ಮಾಡಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಭಾರತವು 350-375 ರನ್ಗಳ ಗುರಿಯನ್ನು ಸಾಧಿಸಬೇಕಾಗಿದೆ. ಇದಕ್ಕಿಂತ ಹೆಚ್ಚು ರನ್ ಚೇಸ್ ಮಾಡುವುದು ಸುಲಭದ ಮಾತಲ್ಲ.

 

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 469 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಮಾತ್ರ ಮಾಡಿದೆ. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಅನ್ನು 173 ರನ್ಗಳ ಮುನ್ನಡೆಯೊಂದಿಗೆ ಆರಂಭಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 123 ರನ್ ಸೇರಿಸುವ ಮೂಲಕ ಆಸ್ಟ್ರೇಲಿಯಾ ತಂಡ ಇಲ್ಲಿಯವರೆಗೆ ಒಟ್ಟು 296 ರನ್ಗಳ ಮುನ್ನಡೆ ಸಾಧಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜ 13 ರನ್, ಡೇವಿಡ್ ವಾರ್ನರ್ 1 ರನ್, ಸ್ಟೀವ್ ಸ್ಮಿತ್ 34 ರನ್ ಮತ್ತು ಟ್ರಾವಿಸ್ ಹೆಡ್ 18 ರನ್ ಗಳಿಸಿ ಔಟಾದರು. ಭಾರತದ ರವೀಂದ್ರ ಜಡೇಜಾ 2 ವಿಕೆಟ್, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ.
ಆಸಿಸ್ 400ಕ್ಕೂ ಹೆಚ್ಚಿನ ಗುರಿ ನೀಡ ಬಯಸುತ್ತದೆ: ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಕನಿಷ್ಠ 250 ಕ್ಕಿಂತ ಹೆಚ್ಚು ರನ್ ಗಳಿಸಲು ಪ್ರಯತ್ನಿಸುತ್ತದೆ. ನಾಲ್ಕನೇ ದಿನ ಚಹಾ ಸಮಯದ ವೇಳೆಗೆ ತಮ್ಮ ಇನ್ನಿಂಗ್ಸ್ ಅನ್ನು ವಿಸ್ತರಿಸುವ ಬಗ್ಗೆ ಚಿಂತಿಸುತ್ತದೆ. ಈ ಮೂಲಕ ಭಾರತಕ್ಕೆ 400 ಕ್ಕೂ ಹೆಚ್ಚಿನ ಗುರಿಯನ್ನು ನೀಡುವ ಸಾಧ್ಯತೆ ಇದೆ. ಇದಕ್ಕಿಂತ ಕಡಿಮೆ ರನ್ ನೀಡಿದಲ್ಲಿ ಆಸಿಸ್ಗೂ ಸೋಲಿನ ಭಯ ಕಾಡುವುದಂತೂ ಸುಳ್ಳಲ್ಲ.

ಭಾರತದ ಪರ ಅಜಿಂಕ್ಯ ರಹಾನೆ 89 ಮತ್ತು ಶಾರ್ದೂಲ್ ಠಾಕೂರ್ 51 ರನ್ ಗಳಿಸುವ ಮೂರನೇ ದಿನದ ಮೊದಲ ಮತ್ತು ಎರಡನೇ ಅವಧಿಯನ್ನು ಭಾರತ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ರಹಾನೆ ಮತ್ತು ಠಾಕೂರ್ ಅವರ 109 ರನ್ಗಳ ಅಮೋಘ ಜೊತೆಯಾಟದಿಂದಾಗಿ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವುದರಿಂದ ತಪ್ಪಿಸಿಕೊಂಡಿದೆ.