ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ: ಸುಧಾಕರ್ ಗೆ ಟಾಂಗ್ ನೀಡಿದ ಡಿಕೆಶಿ

ಬೆಂಗಳೂರು: ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಎಲ್ಲಾ 224 ಶಾಸಕರ ಅನೈತಿಕ ಸಂಬಂಧದ ಬಗ್ಗೆ ತನಿಖೆ ನಡೆಸಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ನೀಡಿದ್ದ ಹೇಳಿಕೆಗೆ ಟಾಂಗ್ ನೀಡಿದ ಅವರು, ಸುಧಾಕರ್ ರಾಜ್ಯದ ಜನರಿಗೆ ನುಡಿಮುತ್ತಗಳನ್ನು ಉದುರಿಸಿದ್ದಾರೆ. ತನಿಖೆ ನಡೆಯಲಿ ಬಿಡಿ, ಬಹಳ ಸಂತೋಷ ಎಂದರು.

ಇನ್ನೂ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ನೂರಕ್ಕೆ ನೂರರಷ್ಚು ನಾನು ಏಕ ಪತ್ನಿ ವ್ರತಸ್ಥ ಎಂದು ಹೇಳಿದ್ದಾರೆ.