ಪಶುವೈದ್ಯೆ ಅತ್ಯಾಚಾರ ಪ್ರಕರಣ: ನಾಲ್ವರು ಕಾಮುಕ ರಕ್ಕಸರು ಎನ್ ಕೌಂಟರ್ ನಲ್ಲಿ ಫಿನಿಶ್ !

ಹೈದರಾಬಾದ್: ದೇಶವನ್ನೇ ತಲ್ಲಣಗೊಳಿಸಿದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳಾದ ಮೊಹಮ್ಮದ್​ ಅರೀದ್​, ಜೊಲ್ಲು ಶಿವ, ಜೊಲ್ಲು ನವೀನ್ ಹಾಗೂ ಚಿಂತಾಕುಂಟ ಚೆನ್ನಕೇಶವುಲು ಹತರಾಗಿದ್ದಾರೆ.

ಅತ್ಯಾಚಾರ ನಡೆದ ಸ್ಥಳ‌ ಮಹಜರು ನಡೆಸಲು ತೆರಳಿದ ವೇಳೆ ಆರೋಪಿಗಳು ತಪ್ಪಿಸಲು‌ ಯತ್ನಿಸಿದ್ದರು. ಅಲ್ಲದೇ ಪೊಲೀಸರ ಮೇಲೆ‌ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಎನ್ ಕೌಂಟರ್ ನಡೆಸಿದ್ದಾರೆ. ಬೆಳಿಗ್ಗೆ 3.30 ರ ವೇಳೆಗೆ ಘಟನೆ ನಡೆದಿದೆ. ನಾಲ್ವರು ಸಾವನ್ನಪ್ಪಿದ್ದಾರೆ.
ಪಂಚರ್ ಆಗಿದ್ದ ಸ್ಕೂಟರ್​ ಟೈರ್​ ರಿಪೇರಿ ಮಾಡಿಕೊಡ್ತೀವಿ ಅಂತ ಬಂದ ಆ ಕಿರಾತಕರು ಪ್ರಿಯಾಂಕಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಮೃತದೇಹವನ್ನು ಭೀಕರವಾಗಿ ಸುಟ್ಟುಹಾಕಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದೀಗ ವಿಶ್ವನಾಥ ಸಜ್ಜನರ್ ನೇತೃತ್ವದ ತಂಡ ಎನ್ ಕೌಂಟರ್ ನಡೆಸಿ ಕಿರಾತಕರನ್ನು ಯಮಲೋಕಕ್ಕೆ ಅಟ್ಟಿದ ಸುದ್ದಿ ಹೊರಬರುತ್ತಿದ್ದಂತೆಯೇ ದೇಶದ ಜನರು ನಿಟ್ಟುಸಿರುಬಿಟ್ಟಿದ್ದಾರೆ.