ಮದುವೆಯಾದ ಬಳಿಕವೂ ಪುರುಷರು- ಮಹಿಳೆಯರು ಬೇರೆಯವರತ್ತ ಆಕರ್ಷಿತರಾಗೋದು ಯಾಕೆ?: ಇದು ಆಫ್ಟರ್ ಮ್ಯಾರೇಜ್ ಕಹಾನಿ!

ವಿವಾಹಿತ ಪುರುಷರು ಸಾಮಾನ್ಯವಾಗಿ ಪರ ಮಹಿಳೆಯರತ್ತ ಜಾಸ್ತಿ ಆಕರ್ಷಿತರಾಗುತ್ತಾರೆ. ಹಾಗೆಯೇ ವಿವಾಹಿತ ಮಹಿಳೆಯರು, ಅನ್ಯ ಪುರುಷರತ್ತ ಆಕರ್ಷಿತರಾಗುತ್ತಾರೆ  ಎನ್ನುವುದು ತುಂಬಾ ಮಂದಿಯ ಅಭಿಪ್ರಾಯ. ಇದು ಕೆಲವೊಂದು ಸಂದರ್ಭಗಳಲ್ಲಿ ಸತ್ಯವೂ ಹೌದು. ಹಾಗಂತ ಎಲ್ಲಾ ವಿವಾಹಿತ ಪುರುಷರು ಮತ್ತು ಮಹಿಳೆಯರು ಒಂದೇ ರೀತಿ ಇರುವುದಿಲ್ಲ. ಕೆಲ ಪುರುಷರು ಪತ್ನಿಗಿಂತಲೂ ಜಾಸ್ತಿ ಬೇರೆ ಮಹಿಳೆಯರ ಕುರಿತು ಆಕರ್ಷಿತರಾಗುತ್ತಾರೆ. ಪತ್ನಿಗಿಂತ ಪತಿಯೇ ಇತರ ಮಹಿಳೆಯರತ್ತ ಆಕರ್ಷಿತರಾಗೋದು ಜಾಸ್ತಿಯಂತೆ. ರಹಸ್ಯವಾಗಿ ಇತರ ಮಹಿಳೆಯರನ್ನು ನೋಡುವುದು ಮತ್ತು ಅವರತ್ತ ಆಕರ್ಷಿತರಾಗುತ್ತಾರೆ. ಎಲ್ಲರೂ ತಮ್ಮ ಹೆಂಡತಿಯನ್ನು ಪ್ರೀತಿಸಿದರೂ ಇತರ ಮಹಿಳೆಯರನ್ನು ಹೆಚ್ಚಾಗಿ ನೋಡಿಯೇ ನೋಡುತ್ತಾರೆ. ಕೆಲವರು ಇದನ್ನು ತೀರಾ ಮುಂದುವರೆಸಿ ಇದು ಇನ್ನೊಂದು ಸಂಬಂಧಕ್ಕೂ ಕಾರಣವಾಗುವ ಸಾಧ್ಯತೆ ಇರುತ್ತದೆ. ಹಾಗೆಯೇ ತನ್ನ ಪತಿಯಲ್ಲಿಲ್ಲದ ಆಕರ್ಷಣೆ ಇತರ ಪುರುಷನಲ್ಲಿ ಕೆಲ ಮಹಿಳೆಯರಿಗೆ ಕಾಣಿಸುತ್ತದೆ. ವಿವಾಹಿತ ಪುರುಷರು ಮತ್ತು ಮಹಿಳೆಯರು ನಿಜವಾಗಿಯೂ ಇತರ ವ್ಯಕ್ತಿಗಳನ್ನು ಏಕೆ ಇಷ್ಟಪಡುತ್ತಾರೆ ?

ಓಪನ್ ನೆಸ್:

ಪುರುಷರಿಗೆ ಪತ್ನಿಯ ಜೊತೆಗೆ ಎಲ್ಲವನ್ನೂ ಹಂಚಿಕೊಳ್ಳಬಹುದಾದರೂ ಕೆಲವೊಮ್ಮೆ ಹೆಸರಿಲ್ಲದ ಆದರೆ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಸಂಬಂಧಕ್ಕೆ ಹಾತೊರೆಯುತ್ತಾರೆ. ಆಗ ಪುರುಷರು ಎಲ್ಲವನ್ನೂ ಹಂಚಿಕೊಳ್ಳಲು ಅಂತಹ ಆತ್ಮೀಯ ಸಂಬಂಧಕ್ಕಾಗಿ ಜಾಲಾಡುತ್ತಾರೆ. ಅದಕ್ಕೆ ಮಹಿಳೆಯರತ್ತ ಸೆಳೆತಕ್ಕೊಳಗಾಗುತ್ತಾರೆ. ಮಹಿಳೆಯರು ಕೂಡ ಇದೇ ರೀತಿ ಅನ್ಯ ಪುರುಷರಿಗಾಗಿ ಕೆಲವೊಮ್ಮೆ ಹಾತೊರೆಯುತ್ತಾರೆ.ಇದಕ್ಕೆ ಆಸ್ಪದ ಕೊಡಬಾರದೆಂದಾರೆ ಪತ್ನಿ ಪತಿಯ ಸಂಬಂಧ ಮುಕ್ತವಾಗಿ ಎಂದಿಗೂ ಆತ್ಮೀಯವಾಗಿರಬೇಕು. ಪತಿಯ ಮಾತುಗಳಿಗೆ ಪತ್ನಿ, ಪತ್ನಿಯ ಮಾತಿಗೆ ಪತಿ ಧ್ವನಿಯಾಗಬೇಕು, ಕಿವಿಯಾಗಬೇಕು. ಆಗ ಪತಿ ಬೇರೊಬ್ಬಳನ್ನು ಹುಡುಕುವ ಸ್ಥಿತಿ ಬರಲಿಕ್ಕಿಲ್ಲ.

ಪುರುಷರು ಸಕಾರಾತ್ಮಕ ಜನರನ್ನು ಬಯಸುತ್ತಾರೆ. ವಿವಾಹಿತ ಮಹಿಳೆ ಯಾವಾಗಲೂ ನೋವಿನಲ್ಲಿದ್ದಾಳೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ, ಮತ್ತು ನಕಾರಾತ್ಮಕವಾಗಿ ಯೋಚಿಸುವುದು ಕಷ್ಟ. ಆದ್ದರಿಂದ, ಆ ಸಂದರ್ಭದಲ್ಲಿ, ಪುರುಷರು ಸಕಾರಾತ್ಮಕವಾಗಿ ಯೋಚಿಸುವ ಮತ್ತು ಅವರತ್ತ ಆಕರ್ಷಿತರಾಗುವ ಮಹಿಳೆಯರ ಬಗ್ಗೆ ಯೋಚಿಸುತ್ತಾರೆ.

ಪತಿ ಮತ್ತು ಪತ್ನಿ ಹೆಚ್ಚು ಮಾತನಾಡದಿದ್ದಾಗ, ಅವರ ನಡುವೆ ಪರಸ್ಪರ ಸಂಬಂಧವಿಲ್ಲದಿದ್ದಾಗ, ಇಬ್ಬರ ಮನಸ್ಸುಗಳು ಭೇಟಿಯಾಗದಿದ್ದಾಗ, ಇಬ್ಬರೂ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗದಿದ್ದಾಗ ಪತಿ ಬೇರೆ ಹೆಂಗಸರ ಕುರಿತು ಆಕರ್ಷಿತನಾಗುತ್ತಾನೆ.

ತನ್ನ ಇಷ್ಟಕ್ಕೆ ಹವ್ಯಾಸಕ್ಕೆ ಬೇಡಿಕೆಗೆ ಪತ್ನಿ ಸ್ಪಂದಿಸದೇ ಇದ್ದಾಗ ಪತಿ ಬೇರೆ ದಾರಿ ಹುಡುಕಿಕೊಳ್ಳುತ್ತಾನೆ. ತನ್ನನ್ನು ಇಷ್ಟಪಡುವ, ನೋಟಗಳಲ್ಲಿ ಇರಿಯುವ ಹೆಂಗಸರು ಸಿಕ್ಕಿದಾಗ ಅವರ ಜೊತೆ ಹೆಚ್ಚೆಚ್ಚು ಮಾತಾಡಲು ತೊಡಗುತ್ತಾನೆ. ಪತ್ನಿಯಲ್ಲಿ ಸಿಗದ ಖುಷಿ, ಸಂತೃಪ್ತಿ ಆಕೆಯಲ್ಲಿ ಸಿಗಬಹುದು ಎಂದು ಬಯಸುತ್ತಾನೆ. ಮನೆಯಲ್ಲಿ ಆಗಾಗ ಆಗುವ ಜಗಳ, ಗಂಡನ ಮೇಲೆ ಪತ್ನಿ ರೇಗೋದು ಮೊದಲಾದ ಘಟನೆಗಳಿಂದ ಮಾನಸಿಕವಾಗಿ ನೊಂದು ತನ್ನನ್ನು ಪ್ರೀತಿಸುವ ಇನ್ನೊಂದು ಜೀವ ಬೇಕು ಎಂದು ಬಯಸುತ್ತಾನೆ. ಇಂತಹ ಗೌಪ್ಯ ಸಂಬಂಧಗಳು ಕೊಡುವ ಖುಷಿಯ ಮುಂದೆ ಪತ್ನಿಯ ಮುಂಗೋಪ, ರೇಗಾಟದ ಬಿಸಿಯಿಂದ ಅವನು ಮಾನಸಿಕವಾಗಿ ತಪ್ಪಿಸಿಕೊಳ್ಳುತ್ತಾನೆ.

ಪತಿ ಸ್ಪಂದಿಸದಿದ್ದಾಗ!

ತನ್ನ ಭಾವನೆಗೆ ಮತ್ತು ಲೈಂಗಿಕ ಸಂಬಂಧಕ್ಕೆ ಪತಿ ಸ್ಪಂದಿಸದೇ ಇದ್ದಾಗ ಅನಿವಾರ್ಯವಾಗಿ ಪತ್ನಿ ಪರಪುರುಷನತ್ತ ಆಕರ್ಷಿತರಾಗಬಹುದು. ಹಾಗಾಗಿ ಪತಿ ಆಗಾಗ ಪತ್ನಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.

ಪತಿ-ಪತ್ನಿ ಇಬ್ಬರೂ ಆಗಾಗ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಗುಣ ಹೊಂದಿದ್ದರೆ ಇಬ್ಬರೂ ಬೇರೆ ವ್ಯಕ್ತಿಯತ್ತ ಆಕರ್ಷಿತರಾಗೋದು ತಪ್ಪಬಹುದು.