ಮೂರನೇ ಮಾಸಿಕ “ಉನ್ನತಿ ಉದ್ಯೋಗ ಮೇಳ”ದಲ್ಲಿ ನೂರಾರು ಉದ್ಯೋಗ ಅವಕಾಶ ಸೃಷ್ಟಿ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಸುಪ್ರಸಿದ್ಧ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಪ್ರತಿ ತಿಂಗಳು ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಪ್ರಾರಂಭಿಸಿದ್ದು, ಇಂದು ತನ್ನ ಕ್ಯಾಂಪಸ್ ನಲ್ಲಿ ಮೂರನೇ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನೂರಾರು ಉದ್ಯೋಗಾಕಾಂಕ್ಷಿಗಳು ನೇರ ಹಾಗೂ ಆನ್ ಲೈನ್ ಸಂದರ್ಶನ ಮೂಲಕ ವಿವಿಧ ಕ್ಷೇತ್ರಗಳ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

ಮೆಡ್ ಪ್ಲಸ್, ಮೆಸ್ಸಿಲಿ ಇಂಡಿಯಾ ಫ್ರೈ ಲಿ, ಯುಕೆ 27 ದ ಫರ್ನ್, ಕಿಲೋಮೀಟರ್ ಟೂರಿಸಂ ಫ್ರೈ ಲಿ., ಹೈಫಿಡಲಿಟಿ ಸೊಲ್ಯೂಷನ್ಸ್, ನ್ಯೂಟೆಕ್, ಬೆಲ್ಲೋ ಸೀಲ್, ಆರ್ ಡ್ರಿಯೋ ಟೆಕ್ನಾಲಜೀಸ್, ಲಿನ್ನೆಟ್ ಹಾಸ್ಪಿಟಾಲಿಟಿ, ಡಿಜಿಟಲ್ ಸಾರಥಿ, ಈಶ್ ಮೋಟಾರ್ಸ್,ಪುನರ್ ನವ ಇನ್ಶುರೆನ್ಸ್, ಅವತಾರ್ ಹೋಟೆಲ್ಸ್, ಬ್ಲಾಕ್ ಅಂಡ್ ಗ್ರೇ, ಪಿ ಎಸ್ ಮ್ಯಾಜಿಕ್ ವ್ಯಂಡ್ ಕ್ರಿಯೇಷನ್ಸ್ ಹೀಗೆ 25ಕ್ಕೂ ಹೆಚ್ಚಿನ ಕಂಪೆನಿಗಳು ಭಾಗವಹಿಸಿದ್ದವು.

ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ “ಕಳೆದ ಎರಡು ಉದ್ಯೋಗ ಮೇಳಗಳಿಗೆ ಅಭ್ಯರ್ಥಿಗಳಿಂದ ಹಾಗೂ ಉದ್ಯೋಗದಾತರಿಂದ ಉತ್ತಮ ಸ್ಪಂದನೆ ದೊರಕಿದ್ದು, ಜಿಲ್ಲೆಯ ಹಾಗೂ ರಾಜ್ಯದ ನೂರಾರು ಯುವಕ- ಯುವತಿಯರು ಈ ಕಾರ್ಯಕ್ರಮದ ಪ್ರಯೋಜನ ಪಡೆದಿರುತ್ತಾರೆ. ನಮ್ಮ ಸಂಸ್ಥೆಯಿಂದ ತರಬೇತಿ ಪಡೆದ ಅಭ್ಯರ್ಥಿಗಳು ಶೇ.90%ಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಈ ಮೇಳಗಳಲ್ಲಿ ಪಡೆದಿರುವುದು ನಮಗೆ ಸಂತಸದ ವಿಚಾರ”ಎಂದು ತಿಳಿಸಿದರು. ಮುಂದಿನ ಮೇಳಗಳಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಮತ್ತು ಉದ್ಯೋಗದಾತರು.

www.unnathijobs.com ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ರಾಜೇಶ್, ದೀಪಿಕಾ, ಸ್ಮೃತಿ, ಛಾಯಾ, ನಿತಿನ್ ಉಪಸ್ಥಿತರಿದ್ದರು.