ಪುತ್ತೂರು: ಫೆ.10-12 ರವರೆಗೆ ಕ್ಯಾಂಪ್ಕೋ ವತಿಯಿಂದ ಬೃಹತ್ ಕೃಷಿಯಂತ್ರ ಮೇಳ

ಪುತ್ತೂರು: ಕ್ಯಾಂಪ್ಕೋ ನಿಯಮಿತ ಮಂಗಳೂರು, ಅಡಿಕೆ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂದ ಎಂಡ್ ಟೆಕ್ನಾಲಜಿ ಪುತ್ತೂರು ಇದರ ಸಂಯುಕ್ತಾಶ್ರಯದಲ್ಲಿ 5 ನೇ ಬೃಹತ್ ಕೃಷಿಯಂತ್ರ ಮೇಳ ಮತ್ತು ಕನಸಿನ ಮನೆ ಕಾರ್ಯಕ್ರಮವು ಫೆ.10 ರಿಂದ 12 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 8 ರ ತನಕ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯಲಿದ್ದು ಎಲ್ಲರಿಗೂ ಉಚಿತ ಪ್ರವೇಶಾತಿ ಇದೆ ಎಂದು ಪ್ರಕಟಣೆ ತಿಳಿಸಿದೆ.