ಬೆಂಗಳೂರು, ಫೆಬ್ರವರಿ 24: ಸತತವಾಗಿ ಮತ್ತೆ ಮತ್ತೆ ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಗೆ ಗಡುವು ಮತ್ತೆ ಮತ್ತೆ ವಿಸ್ತರಣೆಯಾಗುತ್ತಲೇ ಇದೆ. ಇದೀಗ ಮತ್ತೆ ವಿಸ್ತರಣೆಯಾಗಿದ್ದು ಮಾ.31 ಕೊನೆಯ ದಿನವಾಗಿದೆ.ಈ ಕುರಿತು ರಾಜ್ಯ ಸರಕಾರ ಘೋಷಿಸಿದೆ. ಈವರೆಗೆ 6 ಬಾರಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆಯಾಗಿದೆ.
ಜನವರಿ 31ರವರೆಗೆ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿತ್ತು. ಇದೀಗ ಸಾರಿಗೆ ಇಲಾಖೆ ಮತ್ತೆ ಮಾರ್ಚ್ 31ರವರೆಗೆ ಗಡುವು ವಿಸ್ತರಿಸಿದೆ. ಕರ್ನಾಟಕದಲ್ಲಿ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳಿವೆ. ಇದರಲ್ಲಿ 58 ಲಕ್ಷ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಯಾಗಿವೆ. 2019ರ ಏಪ್ರಿಲ್ 1ರ ಹಿಂದಿನ ಎಲ್ಲ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೆ ಕಡ್ಡಾಯವಾಗಿದೆ.












