ತೂಕ ಇಳಿಸೋದೇ ಈ ಕಾಲದ ಬಹುತೇಕ ಮಂದಿಯ ದೊಡ್ಡ ಸಮಸ್ಯೆ, ಸುಲಭದಲ್ಲಿ ತೂಕ ಇಳಿಸಲು ಏನಾದ್ರೂ ಟಿಪ್ಸ್ ಇದ್ರೆ ಹೇಳಿ ಎಂದು ಕೇಳುವವರಿದ್ದಾರೆ. ಅಂತವರಿಗೆ ಇತ್ತೀಚೆಗೆ ಸಿಂಪಲ್ಲಾಗಿ ಕೆಲವು ದಿನಗಳಲ್ಲೇ 33 ಕೆ ಜಿ ತೂಕ ಇಳಿಸಿಕೊಂಡ ತರಬೇತುದಾರರಾದ ನಿಧಿ ಗುಪ್ತಾ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ನೀವೂ ತೂಕ ಇಳಿಸುವ ಯೋಚನೆಯಲ್ಲಿದ್ರೆ ಈ ಟಿಪ್ಸ್ ಮಿಸ್ ಮಾಡದೇ ಫಾಲೋ ಮಾಡಿ.
ನೇರ ಪ್ರೋಟೀನ್, ತಾಜಾ ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಸಂಪೂರ್ಣ, ನೈಸರ್ಗಿಕ ಆಹಾರಗಳನ್ನು ಸೇವಿಸಿ.
⦿ ಒಂದು ದಿನದಲ್ಲಿ 500-1000 ಕ್ಯಾಲೋರಿ ಕೊರತೆಯನ್ನು ಸೃಷ್ಟಿಸುವ ಮೂಲಕ ವಾರಕ್ಕೆ 1-2 ಪೌಂಡ್ಗಳಷ್ಟು ಸುರಕ್ಷಿತ, ಸಮಂಜಸವಾದ ತೂಕ ಇಳಿಕೆಯ ಗುರಿ ಹಾಕಿ
- ಸಾಧ್ಯವಾದಷ್ಟು ಓಡಾಡಿ, ಮನೆ ಪಕ್ಕ, ಮನೆ ಒಳಗೆ ಅಥವಾ ಎಲ್ಲೂ ಆಗಬಹುದು ಓಡಾಟ ಮುಖ್ಯ.
- ನಿಮ್ಮ ತಟ್ಟೆಯ ಅರ್ಧ ಸಲಾಡ್ ಇರಲಿ, ನಂತರ ಕಾಲು ಭಾಗವನ್ನು ಧಾನ್ಯಗಳಿಗೆ ಮತ್ತು ಕೊನೆಯ ಕಾಲು ಭಾಗವನ್ನು ಪ್ರೋಟೀನ್ನಿಂದ ಭರ್ತಿ ಮಾಡಿ, ಸೇವಿಸಿ.
- ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 15-20 ನಿಮಿಷಗಳ ವಾಕ್ ಮಾಡಲೇಬೇಕು
50 ನಿಮಿಷಗಳ ಶಕ್ತಿ ತರಬೇತಿ, ವಾರದಲ್ಲಿ 3 ದಿನಗಳು ಜೊತೆಗೆ 2 ದಿನಗಳ ಉತ್ತಮ ಕಾರ್ಡಿಯೋ, ಮೆಟ್ಟಿಲುಗಳನ್ನು ಹತ್ತುವುದು, ಜಿಗಿಯುವುದು, 10,000 ಹೆಜ್ಜೆಗಳ ನಡಿಗೆ ಸೇರಿದಂತೆ 2 ದಿನಗಳ ಲಘು ವ್ಯಾಯಾಮ. ಆರೋಗ್ಯದ ಜೀವನಕ್ಕೆ ನಿಮ್ಮನ್ನು ನೀವು ಬದ್ಧರಾಗಿರಿಸಿಕೊಳ್ಳಿ; ಶಾರ್ಟ್ಕಟ್ಗಳನ್ನು ಹುಡುಕಬೇಡಿ. ವ್ಯಾಯಾಮ ತಪ್ಪಿಸಬೇಡಿ.
ದೇಹದಾದ್ಯಂತ ಕೊಬ್ಬಿನ ಕೋಶಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಕೆಲವು ಜನರು ಕೆಲವು ಸ್ಥಳಗಳಲ್ಲಿ ಹೆಚ್ಚು ಕೊಬ್ಬಿನ ಕೋಶಗಳನ್ನು ಹೊಂದಿರುತ್ತಾರೆ, ಅಂದರೆ ಈ ಭಾಗಗಳು ದಪ್ಪವಾಗುವ ಸಾಧ್ಯತೆ ಹೆಚ್ಚು.ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ದೇಹದ ಕೊಬ್ಬು ಇರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೊಂಟದಲ್ಲಿ ಹೆಚ್ಚುವರಿ ಕೊಬ್ಬನ್ನು ಸಂಗ್ರಹಿಸುತ್ತಾರೆ. ಹಾಗಾಗಿ ಮಹಿಳೆಯರು ದಿನ ನಿತ್ಯ ವ್ಯಾಯಾಮ ರೂಡಿಸಿಕೊಳ್ಳಿ. ಇಷ್ಟು ಮಾಡಿದರೆ ಖಂಡಿತ ತೂಕ ಕಳೆದುಕೊಳ್ತೀರಿ ಎಂದು ತೂಕ ಇಳಿಸಿಕೊಂಡ ತರಬೇತುದಾರಾದ ನಿಧಿ ಗುಪ್ತಾ ಹೇಳಿದ್ದಾರೆ.