ಯಕ್ಷಗಾನದಲ್ಲೂ ವೈರಲ್ಲಾಯ್ತು“ಹೂವಿನ ಬಾಣದಂತೆ” ಹಾಡು: ನಕ್ಕು ಸುಸ್ತಾದ ಪ್ರೇಕ್ಷಕರು! ಕೆಲವರು ಗರಂ

ಕಳೆದ ಒಂದು ವಾರದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗುತ್ತಿರುವ “ಹೂವಿನ ಬಾಣದಂತೆ ಯಾರಿಗೂ ಕಾಣದಂತೆ” ಹಾಡು ಈಗ ಯಕ್ಷಗಾನದ ರಂಗಸ್ಥಳದಲ್ಲೂ ಸದ್ದು ಮಾಡಿದೆ. ಆ ಮೂಲಕ ಸೋಶಿಯಲ್ ಮೀಡಿಯಾದ ಈ ಟ್ರೆಂಡಿಂಗ್ ಹಾಡಿಗೆ  ಯಕ್ಷಪ್ರಿಯರು ನಕ್ಕು ನಕ್ಕು ಸುಸ್ತು ಹೊಡೆದಿದ್ದಾರೆ.

ಹೌದು. ಸೋಶಿಯಲ್ ಮೀಡಿಯಾದಲ್ಲಿ ಯಕ್ಷಗಾನದ ತುಣುಕೊಂದು ವೈರಲ್ ಆಗಿದೆ. ಯಕ್ಷಗಾನ ಕಲಾವಿದರಾದ ಉದಯ ಹೆಗಡೆ ಕಡಬಾಳ, ಪಾತ್ರವೊಂದನ್ನು ನಿರ್ವಹಿಸುತ್ತ ನನಗೆ ರೂಪದಿಂದಲೇ ತೊಂದರೆ ಕೊಡುತ್ತಿದ್ದಾಳೆ ಅವಳು “ಯಾವ ರೀತಿ ಅಂದ್ರೆ “ಹೂವಿನ ಬಾಣದಂತೆ..ಯಾರಿಗೂ ಕಾಣದಂತೆ” ಎಂದು ಹಾಡನ್ನು ಹಾಡಿದ್ದಾರೆ. ಈ ಹಾಡು ತಮ್ಮ ನೆಚ್ಚಿನ ಕಲಾವಿದನ ಬಾಯಲ್ಲಿ ಬಂದದ್ದೇ ತಡ  ಪ್ರೇಕ್ಷಕರು ಗೊಳ್ ಎಂದು ನಕ್ಕು ನಲಿದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿಈ ಆಡಿಯೋ ತುಣುಕು ಸದ್ದು ಮಾಡತೊಡಲಿದೆ. ಆದರೆ  ಸೋಶಿಯಲ್ ಮೀಡಿಯಾ ರೀಲ್ಸ್ ನಲ್ಲಿ ಯಾರೋ ಹಾಡಿದ್ದನ್ನು ಯಕ್ಷಗಾನ ರಂಗಸ್ಥಳಕ್ಕೆ ತಂದಿದ್ದು ತಪ್ಪು, ಯಕ್ಷಗಾನದ ಶಿಷ್ಟಾಚಾರ ಮೀರಿ ಗಿಮಿಕ್ ಮಾಡುವ ಇಂತಹ ಡೈಲಾಗ್ ಗಳು ಬೇಡವಿತ್ತು ಎಂದು ಪ್ರಬುದ್ಧ ಯಕ್ಷಗಾನ ಪ್ರೇಕ್ಷಕರು ಈ ಆಡಿಯೋಗೆ ಖಾರವಾಗಿ ಕಮೆಂಟ್ ಮಾಡಿದ್ದಾರೆ. ಪ್ರಚಲಿತ ಟ್ರೆಂಡಿಂಗ್ ನಲ್ಲಿರುವ ಹಾಡೊಂದನ್ನು ಈ ರೀತಿ ಬಳಸಿದರೆ ತಪ್ಪೇನಿಲ್ಲ, ಇದು ಕಲಾವಿದರ ಕ್ರಿಯಾಶೀಲತೆ, ಎಂದು ಇನ್ನಷ್ಟು ಪ್ರೇಕ್ಷಕರು ಕಮೆಂಟ್ ಮಾಡಿದ್ದಾರೆ. ಅಂತೂ ಇಂತೂ  “ಬಿರುಗಾಳಿ” ಚಿತ್ರದ ಹಾಡೊಂದನ್ನು ನಿತ್ಯಶ್ರೀ ಎನ್ನುವ ಕಾಲೇಜು ಹುಡುಗಿ ತಮಾ‍ಷೆಗೋಸ್ಕರ, ಜನಪ್ರಿಯತೆಗೋಸ್ಕರ ಹಾಡಿ ವೈರಲ್ ಮಾಡಿರುವುದಕ್ಕೆ ಸೋಶಿಯಲ್ ಮೀಡಿಯಾದ ಪ್ರೇಕ್ಷಕರು ಕೂಡ ಕುಣಿದಿದ್ದಾರೆ.