ನೂತನ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರಿಗೆ ಹೆಜಮಾಡಿಯಲ್ಲಿ ಅದ್ಧೂರಿ ಸ್ವಾಗತ

ಪಡುಬಿದ್ರೆ: ಕರ್ನಾಟಕ ಸರ್ಕಾರದ ನೂತನ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಮಂಗಳವಾರ ಉಡುಪಿ ಜಿಲ್ಲೆಯ ಗಡಿಭಾಗವಾದ ಹೆಜಮಾಡಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನೂತನ ಗೃಹ ಸಚಿವರಾದ ನಂತರ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಸಚಿವರನ್ನು ಹೆಜಮಾಡಿ ಟೋಲ್ ಗೇಟ್ ಹತ್ತಿರ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಎಸ್. ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ಸುನಿಲ್‌ ಡಿ ಬಂಗೇರ, ಆಮೀರ್, ಎಂ ಎಸ್ ಶಾಫಿ, ದಿನೇಶ್, ದಿವಾಕರ್ ಶೆಟ್ಟಿ, ಗಣೇಶ್ ಕೋಟ್ಯಾನ್, ಹರೀಶ್ ನಾಯಕ್, ಅಝೀಜ್ ಹೆಜಮಾಡಿ, ಶೇಖರ್ ಹೆಜಮಾಡಿ, ರತನ್ ಶೆಟ್ಟಿ, ಶರ್ಫುಧ್ಧೀನ್ ಶೇಖ್, ರಮೀಝ್ ಹುಸೈನ್, ಸುಧೀರ್ ಕರ್ಕೇರ, ದೀಪಕ್ ಕುಮಾರ್ ಎರ್ಮಾಳ್, ಆಸೀಫ್ ಹನ್ನನ್, ಪ್ರಭಾ ಶೆಟ್ಟಿ, ಅಶ್ವಿನಿ, ಪ್ರಭಾಕರ ಆಚಾರ್ಯ, ಶೇಖಬ್ಬ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು.