ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಹೋಮ್ ಐಸೋಲೇಷನ್, ಆರೈಕೆ ಪ್ಯಾಕೇಜ್ ಕಿಟ್

ಮಣಿಪಾಲ: ಸರ್ಕಾರದ ಮಾರ್ಗಸೂಚಿಯಂತೆ ಮನೆಯಲ್ಲಿಯೇ ಐಸೋಲೇಷನ್ ಆಗುವ ಕೊರೊನಾ ರೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಹೋಮ್ ಐಸೋಲೇಷನ್ ಆರೈಕೆ ಕಾರ್ಯಕ್ರಮ ಮತ್ತು ಕಿಟ್ ಬಿಡುಗಡೆಗೊಳಿಸಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಣಾಧಿಕಾರಿ ಜಿ ಮುತ್ತಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ  ಮೊದಲ ಕಿಟ್ ಹಸ್ತಾಂತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಮಾರುಕಟ್ಟೆ ಮುಖ್ಯಸ್ಥ ಸಚಿನ್ ಕಾರಂತ ಮತ್ತು ಆಪರೇಷನ್ ಮುಖ್ಯಸ್ಥ ಜಿಬು ಥಾಮಸ್ ಉಪಸ್ಥಿತರಿದ್ದರು.
ಪ್ಯಾಕೇಜ್ ಕಿಟ್ ನಲ್ಲಿ ಏನೇನಿದೆ?:
ಎರಡು ಬಗೆಯ ಪ್ಯಾಕೇಜ್ ಮತ್ತು ಕಿಟ್ ಸೌಲಭ್ಯವಿದ್ದು, ಹತ್ತು ದಿನಗಳ ಸಾಮಾನ್ಯ ಪ್ಯಾಕೇಜ್ ಗೆ ರೂ. 4000 ಇದರಲ್ಲಿ ಒಂದು ಥರ್ಮೋಮೀಟರ್, ಒಂದು ಪಲ್ಸ್ ಒಕ್ಸಿಮೀಟರ್, ಹತ್ತು ಮುಖಗವಸುಗಳು, ಒಂದು ಪಿ ಪಿ ಇ ಕಿಟ್ , ಒಂದು ಸ್ಯಾನಿಟೈಝೆರ್(500ml) , ಒಂದು ವೈಟಲ್ ಚಾರ್ಟ್ ಗಳಿದ್ದು, ವೈದ್ಯರೊಂದಿಗೆ 3 ಬಾರಿ ಉಚಿತ ವಿಡಿಯೋ ಸಮಲೋಚನೆ (1 ನೇ ದಿನ 5 ನೇ ದಿನ,9 ನೇ ದಿನ), ಒಂದು ಸಲ ಪಥ್ಯಾಹಾರ ತಜ್ಞರೊಂದಿಗೆ ಉಚಿತ ಸಮಾಲೋಚನೆ ಮತ್ತು ದಿನಕ್ಕ ಒಂದು ಸಲ ದಾದಿಯಾರೊಂದಿಗೆ ಉಚಿತ ವಿಡಿಯೋ ಸಮಾಲೋಚನೆ ಒಳಗೊಂಡಿದೆ. ಹತ್ತು ದಿನಗಳ ಸಮಗ್ರ ಪ್ಯಾಕೆಜ್ ರೂ. 6000 ಹೆಚ್ಚುವರಿಯಾಗಿ ಒಂದು ಬಿ ಪಿ ಅಪರೇಟೀಸ್ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0820- 2922761 ಗೆ ಸಂಪರ್ಕಿಸಬಹುದು.