ಅಜೆಕಾರು: ಅಮ್ಮನ ಪ್ರೀತಿ ಮತ್ತು ಹುಟ್ಟೂರಿನ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಒಬ್ಬ ಕಲಾವಿದನಿಗೆ ಹುಟ್ಟೂರಿನ ಗೌರವ ಬಹಳ ಹೆಮ್ಮೆ ತರುವ ವಿಚಾರ ಎಂದು ಅಜೆಕಾರು ಕಲಾಭಿಮಾನಿ ಬಳಗ ಅಧ್ಯಕ್ಷ ಮುಂಬಯಿ ಬಾಲಕೃಷ್ಣ ಶೆಟ್ಟಿ ಹೇಳಿದರು.
ಅಜೆಕಾರು ರಾಮಮಂದಿರದಲ್ಲಿ ನಡೆದ ಪ್ರಾದೇಶಿಕ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಕುಂಟಿನಿ ದೀಪ ಬೆಳಗಿ ನೂತನ ಸಮಿತಿಗೆ ಚಾಲನೆ ನೀಡಿದರು. ಉದ್ಯಮಿ ಅಜೆಕಾರು ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ವಿದ್ವಾಂಸ ಮತ್ತು ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ , ಮುಂಬೈ ನಗರದಲ್ಲಿ ಸರಣಿ ತಾಳಮದ್ದಳೆ, ಯಕ್ಷಗಾನ ಬಯಲಾಟ, ಕಲಾವಿದರ ಸಮ್ಮಾನ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, ತರಬೇತಿ ಮತ್ತು ಗ್ರಂಥ ಪ್ರಕಟಣೆಗಳ ಮೂಲಕ ಗಮನಾರ್ಹ ಸಾಧನೆ ಮಾಡಿದ್ದು . ಊರಿನ ಮಾತೃ ಪ್ರೇಮವನ್ನು ಉಳಿಸುವ ಸಲುವಾಗಿ ಪ್ರಾದೇಶಿಕ ಸಮಿತಿ ರಚಿಸಿ ಅಲ್ಲಿಯು ಯಕ್ಷರಂಗದ ಪ್ರೀತಿಯನ್ನು ಹಂಚುವ ಸೇವೆ ನಿಜಕ್ಕೂ ಹೆಮ್ಮೆತರುತ್ತಿದೆ ಎಂದರು.
ಭೋಜ ಮಡಿವಾಳ ಪರಂಬರಬೆಟ್ಟು ಮತ್ತು ಹರೀಶ್ ನಾಯಕ್ ಶುಭಹಾರೈಸಿದರು.
ನೂತನ ಸಮಿತಿ ರಚನೆ:
ಅಜೆಕಾರು ಕಲಾಭಿಮಾನಿ ಬಳಗದ ನೂತನ ಕಾರ್ಯಕಾರಿಣಿ ಸಮಿತಿ ರಚನೆಯಾಗಿದ್ದು, ಗೌರವಾಧ್ಯಕ್ಷರಾಗಿ ಉದ್ಯಮಿ ಶಿವರಾಮ ಜಿ. ಶೆಟ್ಟಿ ದೇವಸ್ಯ ಅಜೆಕಾರು ಹಾಗೂ ಅಧ್ಯಕ್ಷರಾಗಿ ಅಜೆಕಾರು ವಿಜಯ ಶೆಟ್ಟಿ ಆಯ್ಕೆಯಾದರು.
ಸಮಿತಿ ಸಂಚಾಲಕ ಪ್ರಶಾಂತ ಶೆಟ್ಟಿ ಕುಂಟಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಆಚಾರ್ಯ ಸ್ವಾಗತಿಸಿ, ರಾಘವೇಂದ್ರ ಪಾಟ್ಕರ್ ವಂದಿಸಿದರು. ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.