ಹೊಂಬಾಳೆ ಫಿಲ್ಮ್ಸ್ ನಿಂದ ಸಿಕ್ತು ಬಿಗ್ ಅಪ್ ಡೇಟ್; ಸೆಟ್ಟೇರಲಿದೆ “ಮಹಾವತಾರ ಪರಶುರಾಮ”

ಕೆ.ಜಿ.ಎಫ್., ಕಾಂತಾರ, ಸಲಾರ್, ಮಹಾವತಾರ ನರಸಿಂಹ ಮುಂತಾದ ಸಿನಿಮಾಗಳ ಫುಲ್ ಫೇಮಸ್ ಆಗಿರುವ ‘ಹೊಂಬಾಳೆ ಫಿಲ್ಮ್ಸ್‌ʼ ಈಗ ಪರಶುರಾಮನ ಕಥೆಯನ್ನ ಕೈಗೆತ್ತಿಕೊಂಡಿದೆ. ಇದು ಕೇವಲ ಒಂದು ಸಿನಿಮಾವಲ್ಲ, ಬದಲಾಗಿ ಭಾರತದ ಸಾಂಸ್ಕೃತಿಕ ಬೇರುಗಳನ್ನ ಇಂದಿನ ಪೀಳಿಗೆಗೆ ತಲುಪಿಸುವ ಒಂದು ಬೃಹತ್‌ ಪ್ರಯತ್ನ. ವಿಷ್ಣುವಿನ ಅವತಾರಗಳಲ್ಲಿ ಅತ್ಯಂತ ಉಗ್ರ ಹಾಗೂ ಶಕ್ತಿಶಾಲಿ ಎನಿಸಿಕೊಂಡಿರುವ ಪರಶುರಾಮನ ಜೀವನದ ರೋಚಕ ಘಟ್ಟಗಳನ್ನ ಈ ಸಿನಿಮಾ ಒಳಗೊಂಡಿರಲಿದೆ.

ಪರಶುರಾಮ ಜಯಂತಿಯ ವಿಶೇಷ ದಿನದಂದು Hombale Films ತನ್ನ ಹೊಸ ಮಹತ್ವಾಕಾಂಕ್ಷೆಯ ಸಿನಿಮಾ ‘ಮಹಾವತಾರ ಪರಶುರಾಮ’ ಅನ್ನು ಅಧಿಕೃತವಾಗಿ ಘೋಷಿಸಿದೆ. ದೊಡ್ಡ ಮಟ್ಟದ Mahavatar Cinematic Universeನ ಎರಡನೇ ಭಾಗವಾಗಿರಲಿದೆ. ಈ ಯುನಿವರ್ಸ್‌ 2025ರಿಂದ 2037ರವರೆಗೆ ವಿಷ್ಣುವಿನ ದಶಾವತಾರಗಳನ್ನು ಆಧರಿಸಿದ ಹಲವು ಸಿನಿಮಾಗಳ ಸರಣಿಯಾಗಿರಲಿದೆ. ‘ಮಹಾವತಾರ ಪರಶುರಾಮ’ ಸಿನಿಮಾ 2027ರಲ್ಲಿ ಬಿಡುಗಡೆಯಾಗುವ ಯೋಜನೆ ಇದೆ.

ಒಟ್ಟಿನಲ್ಲಿ, ಭಾರತೀಯ ಪುರಾಣಗಳನ್ನು ಆಧುನಿಕ ಅನಿಮೇಷನ್ ಮೂಲಕ ವಿಶ್ವ ಮಟ್ಟದಲ್ಲಿ ತೋರಿಸುವ ದೊಡ್ಡ ಪ್ರಯತ್ನವಾಗಿ ಈ ಸಿನಿಮಾ ಗಮನ ಸೆಳೆಯುತ್ತಿದೆ.