ಡಿಸೆಂಬರ್ 11 ರಂದು ಐತಿಹಾಸಿಕ ತೋನ್ಸೆ-ಪಡುಮನೆ ಕಂಬಳ

ಉಡುಪಿ: ಐತಿಹಾಸಿಕ ತೋನ್ಸೆ-ಪಡುಮನೆ ಕಂಬಳವು ಡಿಸೆಂಬರ್ 11 ರಂದು ನಡೆಯಲಿದೆ. ಇದು ಉಡುಪಿ ಜಿಲ್ಲೆಯ ಪ್ರಸಿದ್ಧ ಕಂಬಳಗಳಲ್ಲಿ ಒಂದಾಗಿದೆ. ತೋನ್ಸೆ ಪಡುಮನೆ ಕಂಬಳದ ಕೀರ್ತಿಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಿಂದ ಕೇರಳದ ಉತ್ತರ ಭಾಗದವರೆಗೆ ಹಬ್ಬಿದ್ದು, ನೆರೆ ರಾಜ್ಯದಿಂದಲೂ ಜನರು ಕಂಬಳದಲ್ಲಿ ಭಾಗವಹಿಸುತ್ತಾರೆ.

ಅಂದು ಮಧ್ಯಾಹ್ನ 1 ಗಂಟೆಗೆ ಕಂಬಳ ಪ್ರಾರಂಭವಾಗಲಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ತೋನ್ಸೆ ಪಡುಮನೆ ಶುಭರಾಮ್ ಶೆಟ್ಟಿ ಮತ್ತು ತೋನ್ಸೆ ಗ್ರಾ.ಪ. ಅಧ್ಯಕ್ಷೆ ಶ್ರೀಮತಿ ಲತಾ ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ. ಶಾಸಕ ರಘುಪತಿ ಭಟ್ ಮತ್ತು ಡಾ ಉಮಾಶಶಿ ಸಿ ಹೆಗ್ಡೆ ಬಹುಮಾನ ವಿತರಣೆ ಮಾಡಲಿದ್ದಾರೆ.

ಪ್ರತಿ ವಿಭಾಗಕ್ಕೆ ಪ್ರಥಮ ಬಹುಮಾನ: 10,000ರೂ, ದ್ವಿತೀಯ ಬಹುಮಾನ:5,000ರೂ ಹಾಗೂ ಕಂಬಳದಲ್ಲಿ ಭಾಗವಹಿಸಿದ ಪ್ರತೀ ಕೋಣಗಳ ಮಾಲಕರಿಗೆ 1,000 ರೂ ಪ್ರೋತ್ಸಾಹ ಧನವನ್ನು ನೀಡಲಾಗುವುದು.

ಕೋಣಗಳ ಮಾಲಕರು 9845459384/9448529578