ಬಿಲ್ಲಾಡಿ: ಬಿಲ್ಲಾಡಿ ದೊಡ್ಮನೆ ಶ್ರೀ ಉದ್ಭವ ಮಹಾಗಣಪತಿ ಕೇಚರಾಹುತ ಬಿಲ್ಲಾಡಿ ಕಂಬಳವು ಡಿ.1 ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದ್ದು, ಪರಂಪರೆಯಂತೆ ಬಿಲ್ಲಾಡಿ ದೊಡ್ಮನೆಯ ಹೆಬ್ಬಾಗಿಲಿನಿಂದ ಮನೆಯ ಕೋಣಗಳು ಸಿಂಗಾರಗೊಂಡು ಕುಟುಂಬಿಕರ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಪುರಮೆರವಣಿಗೆಯ ಮೂಲಕ ಕಂಬಳಗದ್ದೆವರೆಗೆ ಸಾಗಿ ಕಂಬಳದ ಯಜಮಾನರಿಂದ ಸಂಪ್ರದಾಯಬದ್ದವಾಗಿ ಚಾಲನೆ ದೊರೆಯಲಿದೆ.
ಸಂಜೆ 4.30 ಕ್ಕೆ ಕೋಣಗಳ ಸ್ಪರ್ಧೆ ಆರಂಭವಾಗಲಿದ್ದು, 8.30 ಕ್ಕೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ.