ಹಿರಿಯಡಕ: ಕೊಂಡಾಡಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದಲ್ಲಿ ಜೂನ್ 29 ರಂದು ಹಿಂದುಸ್ಥಾನಿ ಸಂಗೀತ ಶಾಲೆಯ ಉದ್ಘಾಟನಾ ಕಾರ್ಯಕ್ರಮ

ಉಡುಪಿ: ಹಿರಿಯಡ್ಕ ಕೊಂಡಾಡಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ(ರಿ) ಭಜನೆಕಟ್ಟೆಯಲ್ಲಿ ಹಿಂದುಸ್ಥಾನಿ ಸಂಗೀತ ಶಾಲೆಯ ಉದ್ಘಾಟನಾ ಕಾರ್ಯಕ್ರಮವು ಜೂನ್ 29 ರಂದು ಬೆಳಿಗ್ಗೆ 9:30ಕ್ಕೆ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಈಟಿವಿ ‘ಎದೆ ತುಂಬಿ ಹಾಡುವೆನು’ ಸೀಸನ್ 1ರ ವಿಜೇತರಾದ ಹಾಗೂ 24 ಗಂಟೆಗಳ ನಿರಂತರ ಗಾಯನದ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ದಾಖಲೆಯನ್ನು ಸಾಧಿಸಿದ ವಿದ್ವಾನ್ ಯಶವಂತ್ ಎಂ.ಜಿ. ಭಾಗವಹಿಸಲಿದ್ದಾರೆ.

ಶ್ರೀ ರಾಘವೇಂದ್ರ ಕಾರ್ಕಳ, ಶ್ರೀ ರಾಘವೇಂದ್ರ ಮಠ, ತೆಳ್ಳಾರು ರಸ್ತೆ, ಶ್ರೀ ನಿತೀಶ್ ಕುಮಾರ್ ಶೆಟ್ಟಿ, ಶ್ರೀ ರಾಮ ಭಜನಾ ಮಂಡಳಿ, ಕೊಂಡಾಡಿ ಹಾಗೂ ಶ್ರೀ ಜಯರಾಮ ಆಚಾರ್ಯ ಕೋಟ್ನಕಟ್ಟೆ, ಅಧ್ಯಕ್ಷರು ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ, ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಹಿಂದುಸ್ಥಾನಿ ಸಂಗೀತ ಶಾಲೆಯ ಶಿಕ್ಷಕರಾಗಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದೇಶಿಕ ಕಲೆಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಗೀತ ಶಿಕ್ಷಕ ವಿದ್ವಾನ್ ಅಶೋಕ್ ಆಚಾರ್ಯ ಸೈಬ್ರಾ ಕಟ್ಟೆಯವರು ತರಬೇತಿಯನ್ನು ನೀಡಲಿದ್ದಾರೆ. ಇಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ, ಹಾರ್ಮೋನಿಯಂ ವಾದನ, ಭಜನೆಗಳು ಹಾಗೂ ಭಾವಗೀತೆಗಳ ತರಬೇತಿ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಭಾಗವಹಿಸಲು ವಯಸ್ಸಿನ ಮಿತಿ ಇರುವುದಿಲ್ಲ. ಮುಕ್ತವಾಗಿ ಸಾರ್ವಜನಿಕರಿಗೆ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9731728991, 9008530676