ಹಿರಿಯಡಕ: ಸಿಕ್ ಟೆಕ್ ಸೊಲ್ಯುಶನ್ ಸ್ಥಳಾಂತರಿತ ಕಚೇರಿ ಉದ್ಘಾಟನೆ

ಹಿರಿಯಡಕ: ಕಳೆದ 12 ವರ್ಷಗಳಿಂದ ಗ್ರಾಮೀಣ ಭಾಗವಾದ ಹಿರಿಯಡಕದಲ್ಲಿ ಉತ್ತಮ ಆನ್ ಲೈನ್ ಸೇವೆ ನೀಡಿ, ಗ್ರಾಹಕರಿಗೆ ಅನುಕೂಲವಾಗುವಂತೆ ತನ್ನ ಕಚೇರಿಯನ್ನು ವಿಸ್ತರಿಸಿ ಜನರಿಗೆ ಇನ್ನಷ್ಟು ಸೇವೆ ದೊರಕಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಉದ್ಯಮಿ ನಟರಾಜ ಹೆಗ್ಡೆ ಹೇಳಿದರು.

ಅವರು ಅ.9ರಂದು ಹಿರಿಯಡಕ ಧನಲಕ್ಷ್ಮಿ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿ ಕಳೆದ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸಿಸ್ ಟೆಕ್ ಸೊಲ್ಯೂಶನ್ ಕಚೇರಿ ಇದೀಗ ನೆಲಮಹಡಿಗೆ ಸ್ಥಳಾಂತರಗೊಂಡಿದ್ದು, ಅದನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ರೈತರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಅಂಜಾರು ಗರಡಿಯ ಸುಂದರ ಪೂಜಾರಿ, ಪಡ್ಡಂ ಬೀಡು ಸುರೇಶ್ ಹೆಗ್ಡೆ, ನಮ ಬಿರುವೆರ್ ಸಂಘಟನೆಯ ಪದಾಧಿಕಾರಿಗಳಾದ ಅಶ್ವಿನಿ ಶಿವ ಪ್ರಕಾಶ್, ಸಂತೋಷ್ ಕುದಿ, ಅರುಣ್ ಜತ್ತನ್, ಸಂದೀಪ್ ಪೂಜಾರಿ, ನಿಖಿಲ್ ಅಂಜಾರು, ಪೃಥ್ವಿರಾಜ್ ಪೂಜಾರಿ, ಶೇಖರ್ ಅಂಜಾರು, ಸುಕೇಶ ಪೂಜಾರಿ, ಗಂಗಾಧರ ಪೂಜಾರಿ, ಸಹನ್, ಉದಯ ಪೂಜಾರಿ ಓಂತಿಬೆಟ್ಟು, ಸಂತೋಷ್ ಪೂಜಾರಿ, ನಿಖಿಲ್ ಬಸ್ತಿ, ಪೆರ್ಡೂರು ಶಾಖೆಯ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಸಿಸ್ ಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕ ರವಿ ಎಸ್. ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.