ಹಿರಿಯಡಕ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ.

ಹಿರಿಯಡಕ: ಓಂ ಶ್ರೀ ಮಂಜುನಾಥಾಯ ನಮಃ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್( ರಿ ) ಉಡುಪಿ ತಾಲೂಕು. ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ಮಾಸಾಶನ ಫಲಾನುಭವಿಯಾದ ಹಿರಿಯಡಕ ಗ್ರಾಮದ ಬೊಮ್ಮರ ಬೆಟ್ಟು ನಿವಾಸಿ ಗೋಪಾಲಕೃಷ್ಣ ದೇವಾಡಿಗ ಇವರಿಗೆ ವಾತ್ಸಲ್ಯ ಮನೆ ಮಂಜೂರಾಗಿದ್ದು ಆ ಪ್ರಯುಕ್ತ ಇಂದು ಮನೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸತ್ಯಾನಂದ ನಾಯಕ್, ಉಡುಪಿ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ವಿಜಯ ಕೊಂಡಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯಡ್ಕ ವಲಯದ ಅಧ್ಯಕ್ಷರಾದ ಗಣೇಶ್, ಜನ ಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಮತಿ ನಳಿನಾ ದೇವಿ, ಉಮೇಶ್ ಶೆಟ್ಟಿ, ಬೊಮ್ಮರ ಬೆಟ್ಟು ಗ್ರಾಮ ಪಂಚಾಯತ್ ಸದಸ್ಯರುಗಳು, ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಪೂರ್ಣಿಮಾ, ಸೇವಾಪ್ರತಿನಿಧಿ ಯಶೋಧ, ಶೌರ್ಯ ಘಟಕದ ಸದಸ್ಯರುಗಳು, ಪಂಚನಬೆಟ್ಟು ಒಕ್ಕೂಟದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.