ಹಿರಿಯಡಕ: ಶ್ರೀರಾಮ ಸಂಗೀತಾಲಯದ ಉದ್ಘಾಟನಾ ಸಮಾರಂಭವು ಜೂ.29 ರಂದು ವಿದ್ವಾನ್ ಅಶೋಕ್ ಆಚಾರ್ಯ ಸೈಬ್ರಾಕಟ್ಟೆ, ವಿದ್ವಾನ್ ಯಶವಂತ್ ಎಂ. ಜಿ, ರಾಘವೇಂದ್ರ ತೆಳ್ಳಾರು ರಸ್ತೆ ಕಾರ್ಕಳ, ಜಯರಾಮ ಆಚಾರ್ಯ ಕೋಟ್ನಕಟ್ಟೆ, ಹಿರಿಯಡಕ ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ ಇಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿರಂತರ 24 ಗಂಟೆಗಳ ಗಾಯನದ ಮೂಲಕ ವಿಶ್ವ ದಾಖಲೆಯನ್ನು ಮಾಡಿದ ವಿದ್ವಾನ್ ಶ್ರೀ ಯಶವಂತ್ ಎಂ. ಜಿ ಹಾಗೂ ಸಂಗೀತ ಶಿಕ್ಷಕರಾದ ವಿದ್ವಾನ್ ಅಶೋಕ್ ಆಚಾರ್ಯ ಸೈಬ್ರಾಕಟ್ಟೆ, ಇವರನ್ನು ಗೌರವಿಸಲಾಯಿತು.
ಶ್ರೀರಾಮ ಸಂಗೀತಾಲಯ ಸಂಸ್ಥೆಯಿಂದ ವಯಸಿನ ವಯಮಿತಿ ಇಲ್ಲದೆ ಸಂಗೀತ ಆಸಕ್ತರಿಗೆ ತರಬೇತಿಯನ್ನು ನೀಡಲಾಗುವುದು. ಸಂಗೀತ ತರಗತಿಯು ಪ್ರತಿ ಶುಕ್ರವಾರ ಸಂಜೆ 5 ಗಂಟೆಯಿಂದ 7 ರ ವರೆಗೆ ನಡೆಯಲಿದೆ.
ಮಾಹಿತಿಗಾಗಿ 9731728991, 9008530676 ಸಂಪರ್ಕಿಸಬಹುದು.












