ಮಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಅನ್ಯ ಹಿಂದೂ ಸಂಘಟನೆಗಳ ವತಿಯಿಂದ ಲವ್ ಜಿಹಾದ್ ಸಂತ್ರಸ್ತರಿಗಾಗಿ ವಿನೂತನ ಮಾದರಿಯ ಸಹಾಯವಾಣಿಯೊಂದನ್ನು ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಅಂಥಹವರಿಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ಇಂತಹ ಸಂತ್ರಸ್ತರಿದ್ದಲ್ಲಿ 9148658108 ಗೆ ಕರೆ ಮಾಡಬಹುದು ಅಥವಾ 9591658108 ಗೆ ವಾಟ್ಸ್ ಆಪ್ ಮಾಡಬಹುದು ಅಥವಾ [email protected] ಗೆ ಇ-ಮೇಲ್ ಕಳುಹಿಸಬಹುದು ಅಥವಾ ಸಂಸ್ಕೃತಿ ಸೇವಾ ಪ್ರತಿಷ್ಠಾನ, ಹಿಂದೂ ರುದ್ರಭೂಮಿ ರಸ್ತೆ, ಕದ್ರಿ ದೇವಸ್ಥಾನದ ಹತ್ತಿರ ಮಂಗಳೂರು ಇಲ್ಲಿ ಭೇಟಿ ನೀಡಬಹುದು.
ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಅಥವಾ ಇದಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆ ದೂರುಗಳಿದ್ದಲ್ಲಿ ತಿಳಿಸಬಹುದು. ಅಗತ್ಯವಿದ್ದಲ್ಲಿ ಕಾನೂನು ಸಲಹೆ ಕೂಡಾ ನೀಡಲಾಗುವುದು. ಸಂತ್ರಸ್ಥರ ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.