ಉಡುಪಿ: ಶಾಲಾ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ವಿದ್ಯಾರ್ಜನೆ ಆಗಬೇಕೇ ಹೊರತು ಅಲ್ಲಿ ಜಾತಿ-ಧರ್ಮ ಬಡವ ಶ್ರೀಮಂತ ಎನ್ನುವ ಭೇದ ಭಾವ ಇರಬಾರದು. ಆ ಕಾರಣಕ್ಕಾಗಿಯೇ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಕಡ್ಡಾಯ ಮಾಡಲಾಗಿದೆ. ಆದರೆ, ಕೆಲವೊಂದು ದೇಶದ್ರೋಹಿ ಹಿತಾಸಕ್ತಿಗಳು ಹಿಜಾಬ್ ವಿಚಾರದಲ್ಲಿ ದೇಶ ಒಡೆಯುವ ಕುತಂತ್ರ ಮಾಡುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಭೂ ಸುರಕ್ಷಾ ಸಂಯೋಜಕ್ ರಮೇಶ್ ಕಲ್ಲೊಟ್ಟೆ ಹೇಳಿದ್ದಾರೆ.
ಸ್ವಾತಂತ್ರ್ಯ ನಂತರವೂ ಭಾರತದ ಕೆಲವೇ ಜನ ಸ್ವಾರ್ಥ ರಾಜಕಾರಣಿಗಳ ಸ್ವಹಿತಾಸಕ್ತಿಗಾಗಿ ದೇಶವನ್ನು ಮೂರು ತುಂಡುಗಳಾಗಿ ಮಾಡಲಾಯಿತು. ಅದನ್ನು ಮತ್ತೆ ಅಖಂಡವಾಗಿ ಜೋಡಿಸಬೇಕೇ ಹೊರತು ಮತ್ತೊಮ್ಮೆ ವಿಭಜನೆ ಅಸಾಧ್ಯ. ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ, ಅಖಂಡ ಭಾರತಕ್ಕಾಗಿ ಯಾವ ತ್ಯಾಗ ಬಲಿದಾನಕ್ಕೂ ನಾವು ಸಿದ್ಧ ಎಂದು ಅವರು ಕರೆನೀಡಿದ್ದಾರೆ.
ಇಡೀ ಭಾರತ ದೇಶ ಹಿಂದೂ ಧರ್ಮದ ಆಧಾರದಲ್ಲಿ ನೆಲೆನಿಂತರೂ ಇಲ್ಲಿ ಎಲ್ಲಾ ಜಾತಿ ಧರ್ಮದವರಿಗೂ ನೆಲೆಕಂಡುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಆದರೂ ಹಿಜಾಬ್ ಹೆಸರಲ್ಲಿ ಆಶ್ರಯ ಕೊಟ್ಟು, ಉಂಡ ಮನೆಗೆ ದ್ರೋಹ ಬಗೆಯುವ ದೇಶ ವಿಭಜನೆ ಮಾಡುವ ಕುತಂತ್ರಕ್ಕೆ ಹಾಗೂ ಇದಕ್ಕೆ ಸಹಕಾರ ನೀಡುತ್ತಿರುವ ವೋಟ್ ಬ್ಯಾಂಕ್ ರಾಜಕಾರಣಿಗಳಿಗೆ ಈ ದೇಶದ ಜನತೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠವನ್ನು ಕಲಿಸಲಿದ್ದಾರೆ ಅವರು ಎಚ್ಚರಿಕೆ ನೀಡಿದ್ದಾರೆ.