ಪರ್ಪಲೆ ಗಿರಿಯಲ್ಲಿ ಹೈ ಮಾಸ್ಟ್ ದೀಪ ಅಳವಡಿಕೆ

ಕಾರ್ಕಳ:   ಶ್ರೀ ಕ್ಷೇತ್ರ ಅತ್ತೂರು ಪರ್ಪಲೆ ಗಿರಿಯಲ್ಲಿ ದಾನಿಗಳೊಬ್ಬರು ಕೂಡ ಮಾಡಿದ ಹೈಮಾಸ್ಟ್ ದೀಪವನ್ನು  ರಾಮನವಮಿಯ ಪುಣ್ಯ ದಿನದಂದು ಅಳವಡಿಸಲಾಯಿತು.

ಬಾಲಾಜಿ ಶಿಬಿರದ ಗುರುಸ್ವಾಮಿ ಬಾಲಕೃಷ್ಣ ಹೆಗ್ಡೆಯವರು ಗುಂಡಿಯನ್ನು ಒತ್ತುವುದರ ಮೂಲಕ ಉದ್ಘಾಟನೆ ಮಾಡಿದರು.

 

ಈ ಸಂದರ್ಭ ಟ್ರಸ್ಟಿಗಳಾದಂತಹ ಪ್ರಶಾಂತ್ ನಾಯಕ್, ಚಂದ್ರಶೇಖರ್ ಶೆಟ್ಟಿ ಪುನರತ್ಥಾನ ಸಮಿತಿಯಲ್ಲಿರುವ ಬೋಳ ಪ್ರಶಾಂತ್ ಕಾಮತ್, ನಿತ್ಯಾನಂದ ಪೈ, ಹಿಂ.ಜಾ.ವೇ ಸಂಘಟನೆಯ ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ, ರಮೇಶ್ ಕಲ್ಲೊಟ್ಟೆ, ಗುರುಪ್ರಸಾದ್ ನಾರಾವಿ , ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.