ಚಿಟ್‌ ರಿಜಿಸ್ಟ್ರಾರ್‌ ನೀಡಿದ ಬಹಿರಂಗ ನೊಟೀಸ್‌ಗೆ ಹೈಕೋರ್ಟ್‌ ತಡೆ

ಅಮರಾವತಿ (ಆಂಧ್ರ ಪ್ರದೇಶ): ಮಾರ್ಗದರ್ಶಿ ಚಿಟ್ ಗ್ರೂಪ್​ಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವ ಕುರಿತು ಚಿಟ್​ ರಿಜಿಸ್ಟ್ರಾರ್​ ಹೊರಡಿಸಿದ್ದ ಸಾರ್ವಜನಿಕ ನೊಟೀಸ್​ಗೆ ಆಂಧ್ರ ಪ್ರದೇಶ ಹೈಕೋರ್ಟ್​ ತಡೆಯಾಜ್ಞೆ ಕೊಟ್ಟಿದೆ.ಮಾರ್ಗದರ್ಶಿ ಚಿಟ್ ಗ್ರೂಪ್​ಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವ ಕುರಿತು ಚಿಟ್​ ರಿಜಿಸ್ಟ್ರಾರ್​ ಹೊರಡಿಸಿದ್ದ ಸಾರ್ವಜನಿಕ ನೊಟೀಸ್​ಗೆ ಆಂಧ್ರ ಪ್ರದೇಶ ಹೈಕೋರ್ಟ್ ಇಂದು​ ತಡೆ ನೀಡಿತು.

ಸಾರ್ವಜನಿಕ ನೊಟೀಸ್​ ಆಧಾರದ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೆ ಹೈಕೋರ್ಟ್​ ತಡೆ ಕೊಟ್ಟಿದೆ. ಚಂದಾದಾರರು ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಕುರಿತಂತೆ ಮಧ್ಯಂತರ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅರ್ಜಿಗಳನ್ನು ಜೊತೆಯಾಗಿಯೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿತು.

ಈ ಹಿಂದೆ ಚಂದಾದಾರರು ಸಲ್ಲಿಸಿರುವ ಅರ್ಜಿಗಳ ಕುರಿತು ತಡೆ ನೀಡಲಾಗಿದೆ. ಚಂದಾದಾರರ ಅರ್ಜಿಗಳು ಹಾಗೂ ಮಾರ್ಗದರ್ಶಿ ಗ್ರೂಪ್​ನ ಅರ್ಜಿಗಳ ನಡುವೆ ಪರಸ್ಪರ ಸಂಬಂಧವಿದೆ. ಹೀಗಾಗಿ ಎರಡನ್ನೂ ಏಕಕಾಲಕ್ಕೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.

ಆಕ್ಷೇಪಣೆ ಕೋರಿ ಸಾರ್ವಜನಿಕ ನೊಟೀಸ್​ ನೀಡುವುದು ರಿಜಿಸ್ಟ್ರಾರ್​​ ಅಧಿಕಾರದ ಪರಿಧಿಗೆ ಬರಲ್ಲ. ಆದರೆ, ಚಿಟ್ ಗುಂಪುಗಳನ್ನು ನಿಲ್ಲಿಸಿ ಮಾರ್ಗದರ್ಶಿ ಗ್ರೂಪ್​ಗೆ ಹಾನಿ ಮಾಡುವ ದುರುದ್ದೇಶದಿಂದ ಸಾರ್ವಜನಿಕ ನೊಟೀಸ್‌ ಕೊಡಲಾಗಿದೆ. ಈ ರೀತಿ ಸಾರ್ವಜನಿಕ ನೊಟೀಸ್​ ಜಾರಿ ಮಾಡುವುದನ್ನು ನಿಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳದಂತೆ ಆದೇಶ ನೀಡಬೇಕೆಂದು ಮಾರ್ಗದರ್ಶಿ ಪರ ವಕೀಲರು ಮನವಿ ಮಾಡಿದ್ದರು.ಹೈಕೋರ್ಟ್​ ಆದೇಶದಿಂದ ಜಗನ್​ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. 60 ವರ್ಷಗಳಿಂದ ಲಕ್ಷಾಂತರ ಗ್ರಾಹಕರನ್ನು ಹೊಂದಿರುವ ಮಾರ್ಗದರ್ಶಿ ಸಂಸ್ಥೆಯ ಕುರಿತು ಒಂದೇ ಒಂದು ದೂರು ಬಂದಿಲ್ಲ. ಆದರೆ, ಕೆಲವು ದಿನಗಳ ಹಿಂದೆ ಮಾರ್ಗದರ್ಶಿಯ ಕೆಲವು ಗುಂಪುಗಳನ್ನು ಆಂಧ್ರ ಪ್ರದೇಶ ಸರ್ಕಾರ ನಿಲ್ಲಿಸಿತ್ತು. ಯಾವುದೇ ದೂರುಗಳಿಲ್ಲದ ಹಾಗೂ ಮಾರ್ಗದರ್ಶಿ ಸಂಸ್ಥೆಗೆ ಯಾವುದೇ ನೊಟೀಸ್ ನೀಡದೆ ಚಿಟ್‌ಗಳನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಅಲ್ಲದೇ, ಚಿಟ್​ ಗುಂಪುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ನೊಟೀಸ್​ ನೀಡುವ ಮುನ್ನವೇ ಕೆಲ ಗುಂಪುಗಳನ್ನು ಅಮಾನತು ಮಾಡಲಾಗಿದೆ. ಈ ಕುರಿತು ಅಧಿಕಾರಿಗಳು ನಂತರ ಆದೇಶ ಹೊರಡಿಸಿದ್ದಾರೆ. ಆಕ್ಷೇಪಣೆಗಳನ್ನು ನಂತರ ಆಹ್ವಾನಿಸಲಾಗಿದೆ ಎಂದೂ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.ಚಂದಾದಾರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿ ಆಂಧ್ರಪ್ರದೇಶ ಸರ್ಕಾರದ ವೆಬ್​ಸೈಟ್​ನಲ್ಲಿ ಚಿಟ್​​​ ರಿಜಿಸ್ಟ್ರಾರ್ ​ಸಾರ್ವಜನಿಕ ನೊಟೀಸ್​ ಪ್ರಕಟಿಸಿದ್ದರು. ಪ್ರಶ್ನಿಸಿ ಮಾರ್ಗದರ್ಶಿ ಚಿಟ್​ಫಂಡ್​ ಕಂಪನಿಯು ಆಂಧ್ರಪ್ರದೇಶದ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯವು ಮಾರ್ಗದರ್ಶಿ ಚಿಟ್​ಫಂಡ್​ ಗ್ರೂಪ್​ ಹಾಗೂ ಸರ್ಕಾರದ ಪರವಾದ ಎರಡೂ ಕಡೆಗಳ ವಾದಗಳನ್ನು ಆಲಿಸಿ ತಡೆಯಾಜ್ಞೆ ನೀಡಿದೆ.