ಉಡುಪಿಯ ಹೀರೋ ಶಕ್ತಿ ಮೋಟಾರ್ಸ್‌ನಲ್ಲಿದೆ ವಿವಿಧ ಹುದ್ದೆಗಳಿಗೆ ನೇಮಕಾತಿ: ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಉಡುಪಿ: ಜಿಲ್ಲೆಯ ಪ್ರಮುಖ ದ್ವಿಚಕ್ರ ವಾಹನ ಮಾರಾಟ ಸಂಸ್ಥೆಗಳಲ್ಲೊಂದಾದ ಹೀರೋ ಶಕ್ತಿ ಮೋಟಾರ್ಸ್ ತನ್ನ ಉಡುಪಿ ಶೋರೂಮ್‌ಗೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಿಸೆಪ್ಷನಿಸ್ಟ್, ಸಿಆರ್‌ಇ ಸೇಲ್ಸ್ (CRE Sales), ಪಿಡಿಐ ಟೆಕ್ನಿಷಿಯನ್ (PDI Technician), ಆಫೀಸ್ ಬಾಯ್ ಹಾಗೂ ಹೌಸ್‌ಕೀಪಿಂಗ್ ಹುದ್ದೆಗಳಿಗೆ ತಲಾ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

ರಿಸೆಪ್ಷನಿಸ್ಟ್ ಹುದ್ದೆಗೆ ಗ್ರಾಹಕರನ್ನು ಸ್ವಾಗತಿಸುವುದು, ಮಾರಾಟ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹಾಗೂ ಕಚೇರಿ ಕಾರ್ಯನಿರ್ವಹಣೆಯ ಜವಾಬ್ದಾರಿಗಳಿರುತ್ತವೆ. ಸಿಆರ್‌ಇ ಸೇಲ್ಸ್ ಹುದ್ದೆಗೆ ಟೆಲಿ ಕಾಲಿಂಗ್ ಮೂಲಕ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ ಮಾರಾಟ ಪ್ರಕ್ರಿಯೆಗೆ ಸಹಕರಿಸುವ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.

ಇನ್ನು ಪಿಡಿಐ ಟೆಕ್ನಿಷಿಯನ್ ಹುದ್ದೆಗೆ ತಾಂತ್ರಿಕ ಅರ್ಹತೆ ಹೊಂದಿರುವವರು, ಐಟಿಐ ಫ್ರೆಶರ್‌ಗಳು ಅಥವಾ ಅನುಭವ ಹೊಂದಿರುವ ಮೆಕ್ಯಾನಿಕ್‌ಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಫೀಸ್ ಬಾಯ್ ಹುದ್ದೆಗೆ 10ನೇ ತರಗತಿ ಅಥವಾ ಪಿಯುಸಿ ಉತ್ತೀರ್ಣರಾಗಿರಬೇಕು ಹಾಗೂ ದ್ವಿಚಕ್ರ ವಾಹನ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ. ಹೌಸ್‌ಕೀಪಿಂಗ್ ಹುದ್ದೆಗೆ ಸ್ವಚ್ಛತಾ ಕಾರ್ಯದಲ್ಲಿ, ವಿಶೇಷವಾಗಿ ಶೋರೂಮ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 79962 10666 ಸಂಖ್ಯೆಯನ್ನು ಸಂಪರ್ಕಿಸಬಹುದು.

ಹೀರೋ ಶಕ್ತಿ ಮೋಟಾರ್ಸ್‌ನ ಉಡುಪಿ, ಬ್ರಹ್ಮಾವರ, ಕುಂದಾಪುರ ಹಾಗೂ ಸಿದ್ದಾಪುರ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

Top of Form

Bottom of Form