ಉಡುಪಿ :ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆ ಕಾರ್ಯಕ್ರಮವು ಉಡುಪಿಯ ಹೀರೋ ಶಕ್ತಿ ಮೋಟಾರ್ಸ್ನಲ್ಲಿ ನಡೆಯಿತು .ಕಾರ್ಯಕ್ರಮದಲ್ಲಿ ಶಕ್ತಿ ಮೋಟರ್ಸ್ನ ಜನರಲ್ ಮ್ಯಾನೇಜರ್ ರಾಹುಲ್ ಹಾಗು ಸಂತೋಷ್ ,ಬಶೀರ್ ,ಗಣೇಶ್ ಉಪಸ್ಥಿತರಿದ್ದರು . ಬಿಡುಗಡೆ ದಿನವೇ ಗ್ರಾಹಕರಿಗೆ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರನ್ನು ವಿತರಿಸಲಾಯಿತು .
ಕೈಗೆಟುಕುವ ಬೆಲೆಯಲ್ಲಿ ಹೊಸ ವಿನ್ಯಾಸದ ಹೀರೋ ಡೆಸ್ಟಿನಿ ಸ್ಕೂಟರ್, ಸಾಟಿಯಿಲ್ಲದ ಮೈಲೇಜ್
ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆಯಾಗಿದೆ. 59 ಕಿಲೋಮೀಟರ್ ಮೈಲೇಜ್, ಕೈಗೆಟುಕುವ ದರ, ಬ್ಲೂಟೂತ್ ಸಂಪರ್ಕ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ಹಲವು ವಿಶೇಷತೆ ಇದರಲ್ಲಿದೆ.

ಹೊಚ್ಚ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆಯಾಗಿದೆ. ಹೊಸ ವಿನ್ಯಾಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಮೈಲೇಜ್, ಕೈಗೆಟುಕುವ ಬೆಲೆ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ. ಹೊಸ ಡೆಸ್ಟಿನಿ 125, ಕುಟುಂಬಗಳಿಗೆ ಸೂಕ್ತ ಆಯ್ಕೆಯಾಗಿದ್ದು, 59 ಕಿಮೀ/ಲೀಟರ್ನ ವಿಭಾಗದಲ್ಲಿ ಅತೀ ಹೆಚ್ಚಿನ ಮೈಲೇಜ್ ಒದಗಿಸಲಿದೆ. ಇನ್ನು ಐದು ಬಣ್ಣಗಳಲ್ಲಿ ಸ್ಕೂಟರ್ ಲಭ್ಯವಿದೆ. ನೂತನ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ.
ಹೊಸ ಹೀರೋ ಡೆಸ್ಟಿನಿ 125 3 ವೇರಿಯೆಂಟ್ನಲ್ಲಿ ಲಭ್ಯ(ಎಕ್ಸ್ ಶೋ ರೂಂ ಬೆಲೆ)
* ಡೆಸ್ಟಿನಿ 125 VX – ರೂ.80,450
* ಡೆಸ್ಟಿನಿ 125 ZX – ರೂ. 89,300
* ಡೆಸ್ಟಿನಿ 125 ZX+ – ರೂ. 90,300
ರೈಡರ್ ಅನುಕೂಲತೆ ಮತ್ತು ಸುರಕ್ಷತೆಗಾಗಿ ಪ್ರಕಾಶಿತ ಸ್ಟಾರ್ಟ್ ಸ್ವಿಚ್ ಮತ್ತು ಆಟೋ-ಕ್ಯಾನ್ಸಲ್ ವಿಂಕರ್ಗಳಂತಹ ಉದ್ಯಮದಲ್ಲೇ ಮೊದಲ ವೈಶಿಷ್ಟ್ಯಗಳಿರುವ ಹೊಸ ಡೆಸ್ಟಿನಿ 125 ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಡೆಸ್ಟಿನಿ 125 ಉದ್ದವಾದ ಸೀಟನ್ನು ಹೊಂದಿದ್ದು ಸವಾರರಿಗೆ ಆರಾಮದಾಯಕ ಮತ್ತು ದಕ್ಷತಾಶಾಸ್ತ್ರದ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಸ್ಮಾರ್ಟ್, ಸುಗಮ ಮತ್ತು ಮಿತ ವ್ಯಯದಲ್ಲಿ ಓಡಾಡಲು ವಿನ್ಯಾಸಗೊಳಿಸಲಾದ ಈ ಸ್ಕೂಟರ್, ಹೊಸ ಡಿಜಿಟಲ್ ಸ್ಪೀಡೋಮೀಟರ್, 190ಮಿಮೀ ಫ್ರಂಟ್ ಡಿಸ್ಕ್ ಬ್ರೇಕ್, ನವೀಕರಿಸಿದ 12/12 ಪ್ಲಾಟ್ಫಾರ್ಮ್ ಮತ್ತು ಅಗಲವಾದ ಹಿಂಬದಿ ಚಕ್ರವನ್ನು ಹೊಂದಿದೆ. ದಕ್ಷತೆ ಹೆಚ್ಚಿಸಲು ಹೀರೋನ ನವೀನ i3S (ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್) ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಬಹಳ ಆಲೋಚಿಸಿ ವಿನ್ಯಾಸಗೊಳಿಸಲಾದ ಸೀಟ್ ಬ್ಯಾಕ್ರೆಸ್ಟ್, ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಅತ್ಯುತ್ತಮ ಸವಾರಿ ಅನುಭವವನ್ನು ನೀಡುತ್ತದೆ.












