ಹೀರೋ ಮೋಟರ್ ಕಾರ್ಪ್ ಮತ್ತು ಹಾರ್ಲೇ- ಡೇವಿಡ್ ಸನ್ ಎರಡು ವರ್ಷಗಳ ಹಿಂದೆ ಸಹಿ ಮಾಡಿದ ಪರಸ್ಪರ ಲಾಭದಾಯಕ ಪಾಲುದಾರಿಕೆಯ ಲಾಭವನ್ನು ಪಡೆದು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ತೂಕದ ಮೋಟಾರ್‌ಸೈಕಲ್ ವಿಭಾಗಕ್ಕೆ ಪ್ರವೇಶಿಸಲು ಯೋಜಿಸುತ್ತಿವೆ. 350 ಸಿಸಿಯಿಂದ 850 ಸಿಸಿ ದ್ವಿಚಕ್ರವಾಹನಗಳನ್ನು ಗುರಿಯಾಗಿಟ್ಟುಕೊಂಡು, ಮೊದಲ ಮೋಟಾರ್‌ಸೈಕಲ್ ಅನ್ನು 2023-24 ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಇದನ್ನು ಆಯಾಯ ಬ್ರ್ಯಾಂಡ್‌ನ ಪ್ರತ್ಯೇಕ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ ಮತ್ತು ವರದಿಯ ಪ್ರಕಾರ ಹೊಸ ಮಾದರಿಗಳ ಶ್ರೇಣಿಯನ್ನು ಒಳಗೊಂಡಿರುತ್ತದೆ.
ಹೀರೋ ಮೋಟೋಕಾರ್ಪ್‌ನ ಮುಖ್ಯ ಹಣಕಾಸು ಅಧಿಕಾರಿ ನಿರಂಜನ್ ಗುಪ್ತಾ ಅವರು ಹೂಡಿಕೆದಾರರ ಸಭೆಯಲ್ಲಿ ಮಾತನಾಡಿ ಮುಂದಿನ ಇಪ್ಪತ್ನಾಲ್ಕು ತಿಂಗಳ ಕಾಲಮಿತಿಯಲ್ಲಿ, “ಪ್ರೀಮಿಯಂ ವಿಭಾಗದಲ್ಲಿ ಘನ ಮತ್ತು ಲಾಭದಾಯಕ” ಮೋಟರ್‌ಸೈಕಲ್‌ಗಳು ಮಾರುಕಟ್ಟೆಗೆ ಬರಲಿವೆ ಎಂದು ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮತ್ತು ಪ್ರಸಿದ್ಧ ಅಮೇರಿಕನ್ ಹೈ-ಎಂಡ್ ಮೋಟಾರ್‌ಸೈಕಲ್ ತಯಾರಕರು ಒಟ್ಟಾಗಿ ಭಾರತಕ್ಕಾಗಿ ಮೋಟರ್ ಸೈಕಲ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ವಿಭಿನ್ನ ಬೆಲೆ ಶ್ರೇಣಿಗಳಲ್ಲಿ ವಿವಿಧ ಗ್ರಾಹಕರಿಗೆ ಸರಿಹೊಂದುವಂತೆ ವಿಭಿನ್ನ ಪವರ್‌ಟ್ರೇನ್‌ಗಳು ಮತ್ತು ದೇಹ ಶೈಲಿಗಳನ್ನು ಅಳವಡಿಸಿಕೊಳ್ಳಲು ಹೊಂದಿಕೊಳ್ಳುವ ಪ್ರಕೃತಿ ಇದರದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೀರೋ ಮತ್ತು ಎಚ್‌ಡಿ ‘ಮಧ್ಯಮ ತೂಕದ ವರ್ಗದ ಪ್ರೀಮಿಯಂ ಮೋಟಾರ್‌ಸೈಕಲ್’ ಅನ್ನು ಅಭಿವೃದ್ಧಿಪಡಿಸುವ ಮುಂದುವರಿದ ಹಂತದಲ್ಲಿದೆ ಎಂದು ಹೇಳಲಾಗಿದೆ. ಮುಂಬರುವ ಮೋಟಾರ್‌ಸೈಕಲ್ ಭಾರತದಲ್ಲಿ ಹಾರ್ಲೆ-ಡೇವಿಡ್‌ಸನ್‌ನ ಅತ್ಯಂತ ಕೈಗೆಟುಕುವ ಬೆಲೆಯ ದ್ವಿಚಕ್ರವಾಗಿರುತ್ತದೆ. ಏಕೆಂದರೆ, ಇದು ಭಾರತದ ರಸ್ತೆಗಳಲ್ಲಿ ರಾಯಲ್ ಎನ್‌ಫೀಲ್ಡ್ ನ ಏಕಸ್ವಾಮ್ಯವನ್ನು ಗುರಿಯಾಗಿಟ್ಟುಕೊಂಡಿದೆ ಎನ್ನಲಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಭರಜರಿಯಾಗಿ ನಡೆಯುತ್ತಿದೆ. ಖರೀದಿದಾರರು 1.5 ಲಕ್ಷ ಶ್ರೇಣಿಯವರೆಗಿನ ಮಾಡೆಲ್ ನ ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿದ್ದಾರೆ. ಮುಂದಿನ ವರ್ಷ ಬಜಾಜ್ ಮತ್ತು ಟ್ರಯಂಫ್ ಪಾಲುದಾರಿಕೆಯು ತಮ್ಮ ಮೊದಲ ಸಹ-ಅಭಿವೃದ್ಧಿಪಡಿಸಿದ ಮೋಟಾರ್‌ಸೈಕಲ್ ಅನ್ನು ಪರಿಚಯಿಸುವ ಯೋಜನೆಯಲ್ಲಿವೆ. ಈ ಮಧ್ಯೆ ಹೀರೋ-ಹಾರ್ಲೇ ಪಾಲುದಾರಿಕೆಯೂ ಭಾರತೀಯ ಮಾರುಕಟ್ಟೆಯತ್ತ ಚಿತ್ತ ನೆಟ್ಟಿದೆ.
ಹಿಂದೆ, ಹಾರ್ಲೆಯ ಮಿಲ್ವಾಕೀ-ಆಧಾರಿತ ಬ್ರ್ಯಾಂಡ್ ಭಾರತದಲ್ಲಿ ಸ್ಟ್ರೀಟ್ 750 ಮತ್ತು ಸ್ಟ್ರೀಟ್ ರಾಡ್ ಅದರ ಕಡಿಮೆ ದುಬಾರಿ ಬೆಲೆಗಾಗಿ ಮಾರಾಟ ಕಂಡಿದೆ. ಆದರೆ ಪ್ರಸ್ತುತ, ಐರನ್ 883 ಬೆಲೆ ಸುಮಾರು ರೂ. 12 ಲಕ್ಷ ರೂ (ಎಕ್ಸ್ ಶೋರೂಂ) ಗಳಿರುವುದರಿಂದ ಜನಸಾಮಾನ್ಯರು ಇದರಿಂದ ದೂರವೆ ಉಳಿದಿದ್ದಾರೆ.