ಉಡುಪಿ: ಉದ್ಯಾವರ ಸಮೀಪದ ಸಂಸ್ಥೆಯೊಂದು ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.
ಫ್ಯಾಷನ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಉದ್ಯೋಗಾವಕಾಶವಾಗಿದೆ. ಸೆಲ್ಸ್ ಎಕ್ಸಿಕ್ಯೂಟಿವ್ ಕಮ್ ಫ್ಯಾಷನ್ ಕನ್ಸಲ್ಟೆಂಟ್ ಹುದ್ದೆಗೆ ಒಟ್ಟು 4 ಅಭ್ಯರ್ಥಿಗಳನ್ನು ಪೂರ್ಣಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 1 ರಿಂದ 3 ವರ್ಷಗಳವರೆಗೆ ಫ್ಯಾಷನ್ ರಿಟೇಲ್, ಲಕ್ಸುರಿ ಬೂಟಿಕ್ ಅಥವಾ ಅಪರಲ್ ಮಾರಾಟ ಕ್ಷೇತ್ರದಲ್ಲಿ ಅನುಭವ ಇರಬೇಕು ಎಂದು ಸೂಚಿಸಲಾಗಿದೆ. ಯಾವುದೇ ವಿಭಾಗದಲ್ಲಿ ಪದವಿ ಅಥವಾ ಡಿಪ್ಲೊಮಾ ಹೊಂದಿರುವವರು ಅರ್ಹರಾಗಿದ್ದು, ಫ್ಯಾಷನ್ ಸಂಬಂಧಿತ ಶಿಕ್ಷಣ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ.
ಇದಲ್ಲದೆ, ಸೀರೆಗಳನ್ನು ವೇಗವಾಗಿ ಹಾಗೂ ಸುಂದರವಾಗಿ ಡ್ರೇಪ್ ಮಾಡುವ ಕೌಶಲ್ಯ ಹೊಂದಿರಬೇಕು. ಗುರಿ ಸಾಧನೆ ಮಾಡಿದವರಿಗೆ ಆಕರ್ಷಕ ಪ್ರೋತ್ಸಾಹಧನಗಳನ್ನೂ ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಸಿ.ವಿ.ಯನ್ನು 96630 98124 ಸಂಖ್ಯೆಗೆ ವಾಟ್ಸಾಪ್ ಮಾಡಿ.

















