ಉಡುಪಿ: ಫ್ಯಾಷನ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶವೊಂದು ಎದುರಿಗಿದೆ. ಡ್ರೇಪ್‌ಮೊಡಾ (Drapemoda) ಸಂಸ್ಥೆಯು ಫ್ಯಾಷನ್ ಡಿಸೈನರ್ ಮತ್ತು ಅಸಿಸ್ಟೆಂಟ್ ಫ್ಯಾಷನ್ ಡಿಸೈನರ್ ಇಂಟರ್ನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಂದಹಾಗೆ ಈ ನೇಮಕಾತಿಯು ಚೆನ್ನೈನಲ್ಲಿ ನಡೆಯಲಿದ್ದು, ಫ್ಯಾಷನ್ ಉದ್ಯಮದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.
ಫುಲ್‌ಟೈಮ್ ಫ್ಯಾಷನ್ ಡಿಸೈನರ್ಹಾಗೂ ಪಾರ್ಟ್‌ಟೈಮ್ ಅಸಿಸ್ಟೆಂಟ್ ಫ್ಯಾಷನ್ ಡಿಸೈನರ್ ಇಂಟರ್ನ್ಹುದ್ದೆಗಳು ಖಾಲಿ ಇದ್ದು, ಫ್ಯಾಷನ್ ಡಿಸೈನ್ ಮತ್ತು ಸ್ಟೈಲಿಂಗ್ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಏನು ಕೌಶಲ್ಯ ಬೇಕು?
ಅಭ್ಯರ್ಥಿಗಳು ಉತ್ತಮ ಸ್ಕೆಚಿಂಗ್ ಕೌಶಲ್ಯ, ಸೃಜನಾತ್ಮಕ ದೃಶ್ಯೀಕರಣ ಸಾಮರ್ಥ್ಯ, ಪರಿಣಾಮಕಾರಿ ಸಂವಹನ ಹಾಗೂ ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸುವ ಕೌಶಲ್ಯ ಹೊಂದಿರಬೇಕು. ಜೊತೆಗೆ ಉತ್ಪಾದನಾ ತಂಡಗಳೊಂದಿಗೆ ಸಮನ್ವಯ ಸಾಧಿಸುವ ಸಾಮರ್ಥ್ಯವೂ ಅಗತ್ಯ.
ಪ್ರೊಫೆಷನಲ್ ಕೋರ್ಸ್ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಂಸ್ಥೆ ತಿಳಿಸಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ CV ಹಾಗೂ ಪೋರ್ಟ್‌ಫೋಲಿಯೊವನ್ನು [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

















