ಉದಯೋನ್ಮುಖ ಕಂಟೆಂಟ್ ಕ್ರಿಯೇಟರ್ ಗಳಿಗೆ ಮಣಿಪಾಲ MSDC ಯಿಂದ ಕ್ಯಾಮೆರಾ ಮುಂದೆ ಮಿಂಚಲು ಇಲ್ಲಿದೆ ಒಂದೊಳ್ಳೆ ಅವಕಾಶ

ಮಣಿಪಾಲ: ಕ್ಯಾಮೆರಾ ಮುಂದೆ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಲು ಆಸಕ್ತಿ ಹೊಂದಿರುವ ಹೊಸ ಪ್ರತಿಭೆಗಳು ಮತ್ತು ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಮಣಿಪಾಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಸೆಂಟರ್‌ (MSDC) ವಿಶೇಷ ಅವಕಾಶ ಕಲ್ಪಿಸಿದೆ.

ಕ್ಯಾಮೆರಾ ಮುಂದೆ ಆತ್ಮವಿಶ್ವಾಸದಿಂದ ಮಾತನಾಡುವ ಹಾಗೂ ತಮ್ಮ ವ್ಯಕ್ತಿತ್ವ ಮತ್ತು ಎನರ್ಜಿಯಿಂದ ಪ್ರೇಕ್ಷಕರ ಗಮನ ಸೆಳೆಯಬಲ್ಲ ಫ್ರೆಶ್‌ ಫೇಸ್‌ಗಳು ಮತ್ತು ಉದಯೋನ್ಮುಖ ಕಂಟೆಂಟ್‌ ಕ್ರಿಯೇಟರ್‌ಗಳನ್ನು MSDC ಆಹ್ವಾನಿಸಿದೆ.

ಆಯ್ಕೆಯಾಗುವವರಿಗೆ MSDC ಸಹಯೋಗದಲ್ಲಿ ಕಂಟೆಂಟ್‌ ರಚಿಸುವ ಅವಕಾಶದೊಂದಿಗೆ ಸಂಭಾವನೆ ಪಡೆಯುವ ಅವಕಾಶವೂ ದೊರೆಯಲಿದೆ. ಈ ಚಿತ್ರೀಕರಣ ಮಣಿಪಾಲದಲ್ಲಿ ನಡೆಯಲಿದ್ದು, ವಿಡಿಯೋಗ್ರಫಿ ಹಾಗೂ ಎಡಿಟಿಂಗ್‌ ಕಾರ್ಯವನ್ನು MSDC ತಂಡವೇ ನಿರ್ವಹಿಸಲಿದೆ.

ಈ ಅವಕಾಶಕ್ಕೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಂಖ್ಯೆಯ ಸಾಮಾಜಿಕ ಮಾಧ್ಯಮ ಫಾಲೋವರ್‌ಗಳ ಅಗತ್ಯವಿಲ್ಲ. ಕ್ಯಾಮೆರಾ ಮುಂದೆ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳುವ ಸಾಮರ್ಥ್ಯ ಮತ್ತು ಪ್ರೇಕ್ಷಕರ ಗಮನ ಸೆಳೆಯುವ ಕೌಶಲ್ಯ ಹೊಂದಿರುವುದು ಪ್ರಮುಖ ಅರ್ಹತೆಯಾಗಿದೆ.

ಆಸಕ್ತರು ತಮ್ಮ ಅತ್ಯುತ್ತಮ ರೀಲ್ಸ್‌ ವಿಡಿಯೊವನ್ನು 8123165069 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಳ್ಳಬಹುದು. ಆಯ್ಕೆಯಾದ ಪ್ರತಿಭೆಗಳಿಗೆ MSDC ತಂಡದೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಲಿದೆ.