ಕುಂದಾಪುರ: ನಿರಂತರ ಯೋಗ ಮಾಡುವುದರಿಂದ ಬೌದ್ಧಿಕವಾಗಿ, ಮಾನಸಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಯೋಗಗುರು ಪ್ರವೀಣ್ ಕುಮಾರ್ ಹೆಗ್ಡೆ ತಿಳಿಸಿದರು.
ಅವರು ಇತ್ತೀಚೆಗೆ ಆದರ್ಶ ಯುವಕ ಮಂಡಲದಲ್ಲಿ ನಡೆದ ಹೆಮ್ಮಾಡಿ ಆಧ್ಯಾತ್ಮಿಕ ಯೋಗ ಕಲಿಕಾ ಕೇಂದ್ರದ ೬ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಯೋಗಬಂಧು ರಾಧಾಕೃಷ್ಣ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರದ ಅಧ್ಯಕ್ಷೆ ಸುಜಾತ ಅಧ್ಯಕ್ಷತೆವಹಿಸಿ ಯೋಗಕೇಂದ್ರದ ಬಗ್ಗೆ ಹಿತನುಡಿಗಳನ್ನಾಡಿದರು.
ಸತೀಶ್ ದೇವಾಡಿಗ ಕೇಂದ್ರದ ಆಯವ್ಯಯ ಮಂಡಿಸಿದರು. ಕೇಂದ್ರದ ಅಧ್ಯಕ್ಷೆ ಹಾಗೂ ಯೋಗ ಶಿಕ್ಷಕಿ ಸುಜಾತ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಹಿರಿಯ ಯೋಗಬಂಧು ಕೃಷ್ಣ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ ಅಂಕದಕಟ್ಟೆ ನಿವಾಸಿ ಸುಜಾತ ಅವರ ಪತಿ ಸುಳ್ಸೆ ನಿವಾಸಿ ಸುಧೀರ್ ದೇವಾಡಿಗ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ವೇದಿಕೆಯಲ್ಲಿ ಶಶಿಧರ ಆಚಾರ್ಯ ಹಿರಿಯ ಯೋಗಬಂಧುಗಳಾದ ಮಹಾಬಲ ಆಚಾರ್ಯ, ಸುಮತಿ ಮೊಗವೀರ, ಬಾಬು ದೇವಾಡಿಗ ಉಪಸ್ಥಿತರಿದ್ದರು.
ಪ್ರಿಯಾ ಸ್ವಾಗತಿಸಿದರು, ರಾಘವೇಂದ್ರ ಯು. ವರದಿ ವಾಚಿಸಿದರು. ಧನ್ಯವಾದ ಸಮರ್ಪಿಸಿದರು. ಸದಾನಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.












