ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು: ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ 14 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ; ಸಂಸ್ಥೆಗೆ 4ನೇ ಬಾರಿ ಉಡುಪಿ ಜಿಲ್ಲಾ ಸಮಗ್ರ ಪ್ರಶಸ್ತಿ

ಹೆಮ್ಮಾಡಿ: ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಉಡುಪಿ ಇವರ ಆಸರೆಯಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವು ಜನತಾ ಪಿಯು ಕಾಲೇಜಿನ ಕ್ರೀಡಾoಗಣದಲ್ಲಿ ನಡೆಯಿತು.

ಕುಸ್ತಿ ಪಂದ್ಯಾಟವು ಬಾಲಕರ ವಿಭಾಗದ ಫ್ರಿ ಸ್ಟೆಲ್ ಹಾಗೂ ಗ್ರಿಕೋ ರೋಮನ್ ಮತ್ತು ಬಾಲಕಿಯರ ವಿಭಾಗ ದಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಸುಮಾರು 160ವಿದ್ಯಾರ್ಥಿಗಳು ಈ ಪಂದ್ಯಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.

ಈ ಪಂದ್ಯಾಟದಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ 14 ವಿದ್ಯಾರ್ಥಿಗಳು ಚಿನ್ನದ ಪದಕ 2 ವಿದ್ಯಾರ್ಥಿಗಳು ಬೆಳ್ಳಿಯ ಪದಕ 8 ವಿದ್ಯಾರ್ಥಿಗಳು ಕಂಚಿನ ಪದಕ ಪಡೆದು ಸತತವಾಗಿ 4ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಕೊಂಡರು.

ವಿದ್ಯಾರ್ಥಿಗಳಾದ ರತ್ವಿಕ್, ಸೌಲತ್, ಪನ್ನಗ, ಶಶಾಂಕ್, ಮಂದಿರ್ ಶೆಟ್ಟಿ,ಸ್ವಸ್ತಿಕ್, ಕಿಶನ್, ಆದಿತ್ಯ, ಪ್ರಣಿತ್, ಗಾಯತ್ರಿ, ಆರ್ಯನ್, ವಿಜಯ್, ಮಂಥನ್, ಸೃಜನ್ ಇವರು ಚಿನ್ನದ ಪದಕ ಪಡೆಯುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.