ಕುಂದಾಪುರ: ಶಾಲಾ ಸರ್ಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಇಲ್ಲಿನ ಜನತಾ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಭಂಡಾರ್‌ಕಾರ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಎಮ್. ಗೊಂಡಾ ವಿದ್ಯಾರ್ಥಿ ಸರ್ಕಾರ ಮತ್ತು ವಿವಿಧ ಸಂಘಗಳನ್ನು ಉದ್ಘಾಟಿಸಿ, ಇಂದಿನ ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕ ದಿನಕರ್ ಎಸ್. ವಹಿಸಿ ಶಾಲಾ ಸರ್ಕಾರದ ಸದಸ್ಯರುಗಳಿಗೆ ಪ್ರಮಾಣ ವಚನವನ್ನು ಭೋದಿಸಿದರು.
ಗಣಿತ ಶಿಕ್ಷಕ ಶ್ರೀಧರ ಗಾಣಿಗ ಸ್ವಾಗತಿಸಿದರು. ವಿವಿಧ ಸಂಘಗಳ ಪರಿಚಯವನ್ನು ಶಿಕ್ಷಕ ಮಹೇಂದ್ರ ದೇವಾಡಿಗ ಮತ್ತು ದೇವೇಂದ್ರ ನಾಯ್ಕ್ ವಾಚಿಸಿದರು. ಹಿಂದಿ ಶಿಕ್ಷಕ ವಿಠಲ್ ರಾವ್ ವಂದಿಸಿದರು. ಕನ್ನಡ ಶಿಕ್ಷಕ ಜಗದೀಶ ಶೆಟ್ಟಿ ನಿರೂಪಿಸಿದರು.