ಉಡುಪಿ : ಈ ಬಾರಿಯ ಲೋಕ ಸಭಾ ಚುನಾವಣೆ ಅಂಗವಾಗಿ ವಿಕಲ ಚೇತನರು ಮತ್ತು ಹಿರಿಯ ನಾಗರೀಕರು, ಅಶಕ್ತರಿಗೆ ಸಾಮಾನ್ಯರಂತೆ ಬಂದು ಮತದಾನ ಮಾಡಲು ಅನುಕೂಲವಾಗುವಂತೆ ಮಾಡಲು, ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ವಿಕಲ ಚೇತನರ ಮಾಹಿತಿ ಕೇಂದ್ರದ ವತಿಯಿಂದ ಕಳೆದ ಬಾರಿ ಆಯೋಜಿಸಿದಂತೆ ವಿಶೇಷ ಚೇತನ ಮತದಾರರ ಸಹಾಯವಾಣಿಯನ್ನು ಆರಂಭ ಮಾಡಲಾಯಿತು.
ಚುನಾವಣೆಗೆ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ, ಮತದಾನ ಕೇಂದ್ರದಲ್ಲಿ ಸೌಲಭ್ಯ, ಬಾಕಿ ಇರುವ ಮತದಾರರ ಗುರುತಿನ ಚೀಟಿ, ಮತದಾನ ದಿನದಂದು ಮತ ಕೇಂದ್ರಕ್ಕೆ ಬರುವ ವ್ಯವಸ್ಥೆ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ಅವಧಿಯಲ್ಲಿ 0820-2574811 ಅನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ನಿರಂಜನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ಮಟ್ಟದ ಅಧ್ಯಕ್ಷೆ ಸಿಂಧು ಬಿ ರೂಪೇಶ್ ವಿಶೇಷ ಚೇತನ ಮತದಾರರ ಸಹಾಯವಾಣಿ ಕೇಂದ್ರ ಉದ್ಘಾಟಿಸಿದರು. ನಗರ ಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಉಪಸ್ಥಿತರಿದ್ದರು.