ಕಳೆದ ಒಂದುವರೆ ವರುಷಗಳಿಂದ ಈ ಮಗು ಕ್ಯಾನ್ಸರ್ ರೋಗದ ವಿರುದ್ದ ಹೊರಾಟಕ್ಕೆ ನಿಂತಿದೆ,ಇಷ್ಟೊತ್ತಿಗೆ ನಾಲ್ಕನೇ ಕ್ಲಾಸಿನಲ್ಲಿ ಕುಳಿತು ತನ್ನ ಸಹಪಾಠಿಗಳೊಂದಿಗೆ ಆಟಪಾಠಗಳಲ್ಲಿ ಭಾಗಿಯಾಗಬೇಕಿದ್ದ ಈ ಮುದ್ದು ಮುಖದ ಕಂದಮ್ಮ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿ ಡಾಕ್ಟರು ನರ್ಸುಗಳ ಮುಖ ನೋಡುತ್ತಿದೆ,
ಸಹಪಾಠಿಗಳ ಜೊತೆ ಆಟವಾಡುತ್ತ ನಲಿಯಬೇಕಾದ ಈ ಮುದ್ದು ಹುಡುಗಿ ಕ್ಯಾನ್ಸರ್ ಕೂಪದಲ್ಲಿ ನಲುಗಿಹೋಗಿದೆ.
ಇದೀಗ ಚಿಕಿತ್ಸೆಗಾಗಿ ಸರಿ ಸುಮಾರು ಮೂವತ್ತೆರಡು ಲಕ್ಷಗಳ ಬೆಟ್ಟದಂತಹ ಮೊತ್ತದ ಅಂದಾಜನ್ನು ಮಾಡುತ್ತಲೇ ಈ ಮಗುವಿನ ತಂದೆ ತಾಯಿ ಕಂಗಾಲಾಗಿ ಕುಳಿತಿದ್ದಾರೆ!
ತೆಕ್ಕಟ್ಟೆಯ ಕೊರವಡಿ ಕ್ರಾಸಿನಲ್ಲೊಂದು ಬೀಡಾ ಅಂಗಡಿ ತೆರೆದು ಕುಳಿತಿರುವ ಈ ಮಗುವಿನ ತಂದೆ ಅಷ್ಟೊಂದು ಹಣವನ್ನು ಒಟ್ಟು ಮಾಡುವುದಾದರೂ ಎಲ್ಲಿಂದ..??ಎನ್ನುವ ಪ್ರಶ್ನೆ ಎದ್ದಿದೆ.
ಮಣಿಪಾಲದ ಆಸ್ಪತ್ರೆ ಅಲೆದು, ಮಂಗಳೂರಿನ ಫಾದರ್` ಮುಲ್ಲರ್ ಅಸ್ಪತ್ರೆಯನ್ನೂ ಸುತ್ತಿ, ಇದೀಗ ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದ ಮುಜುಂದಾರ್ ಶಾ ಮೆಡಿಕಲ್ ಸೆಂಟರ್‌ನ ವೈದ್ಯರು ಭರವಸೆ ಕೊಟ್ಟು ಮೂವತ್ತೆರೆಡು ಲಕ್ಷದ ಬಿಲ್ಲಾಗಲಿದೆ ಎಂದಿದ್ದಾರೆ, ದಿನಕ್ಕೆ ಆಸ್ಪತ್ರೆಯ ಬಿಲ್ಲು ನಲವತ್ತರಿಂದ ಐವತ್ತು ಸಾವಿರ ಆಗುತ್ತಿದೆ.
ಹುಟ್ಟಿದ ಮಗುವನ್ನು ಬದುಕಿಸಿಕೊಳ್ಳಲೇ ಬೇಕಂದು ಪಣತೊಟ್ಟಿರುವ ಆ ಹೆತ್ತ ಕರುಳು ಇದೀಗ ಇದ್ದಬದ್ದಲ್ಲಿ ಹಣ ಜೋಡಿಸುವ ಕೆಲಸಕ್ಕೆ ನಿಂತಿದೆ.
ಗೆಳೆಯರೇ ಈ ಮಗುವಿನ ಜೀವ ಉಳಿಸಲು ನೆರವಾಗಿ:
ನಾವೆಲ್ಲಾ ಇದೇ ಮಾನವೀಯತೆಯ ಒರತೆ ಎಂದೂ ಬತ್ತದ ಜಗತ್ತಿನಲ್ಲೇ ಬದುಕುತ್ತಿದ್ದೇವೆ. ಜನಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು ಇದೊಂದು ಮನಮಿಡಿಯುವ ಕೈಂಕರ್ಯದ ನೊಗಹೊತ್ತಿದೆ..
ಬನ್ನಿ ಈ ಕೆಳಗೆ ಕಾಣಿಸುತ್ತಿರುವ ತೆಕ್ಕಟ್ಟೆಯ ಸ್ಟೇಟ್ ಬ್ಯಾಂಕಿನ ಅಕೌಂಟ್ ನಂಬರಿಗೆ ನಿಮ್ಮ ಕೈಲಾದ ಸಹಾಯ ಮಾಡಿ. ಏನೂ ಅರಿಯದ ಕಂದಮ್ಮ ಬೇಬಿ ಶ್ರ್ಯಾವ್ಯಳ ಬದುಕಿಗೆ ಜೊತೆಯಾಗೋಣ.
ಮಗುವಿನ ತಂದೆಯ ಅಕೌಂಟ್ ನಂಬರ್ ಇಲ್ಲಿದೆ.
Name:Udaya
Account :54058193367
Ifsc:SBIN0041032
SBI tekkatte.
9900655495
Google pay
Pay tm
Phone pay.
– ಪ್ರವೀಣ್ ಯಕ್ಷಿಮಠ