ಹೆಗ್ಗುಂಜೆ: ಮಂಗಳವಾರ ಮಧ್ಯರಾತ್ರಿ 12.30 ಗಂಟೆಗೆ ಡಾ. ಸುರೇಶ್ಚಂದ್ರ ಶೆಟ್ಟಿ ಇವರು ನಿಧನರಾಗಿದ್ದಾರೆ.
ಸುತ್ತಮುತ್ತ ನಾಲ್ಕು ಗ್ರಾಮಗಳಲ್ಲಿ ವೈದ್ಯಕೀಯ ವೃತ್ತಿಯಿಂದ ಮನೆಮಾತಾಗಿದ್ದ ಇವರು ಜನರಿಗೆ ಉತ್ತಮ ಸೇವೆ ನೀಡಿದ್ದಾರೆ. ತನ್ನ ಅನಾರೋಗ್ಯವನ್ನೂ ಲೆಕ್ಕಿಸದೆ ಮಧ್ಯರಾತ್ರಿ ಹೊತ್ತಿನಲ್ಲೂ ರೋಗಿಗಳ ಮನೆಗೆ ತೆರಳಿ ಸೇವೆಯನ್ನು ನೀಡಿರುತ್ತಾರೆ. ಸೇವೆಗೆ ಪ್ರಚಾರ ಬಯಸದ ಇವರು ಹಲವಾರು ಸನ್ಮಾನಗಳನ್ನು ಕೂಡಾ ನಿರಾಕರಿಸಿದ್ದಾರೆ.