ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ: ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರಮಾಣ ವಚನ ಸ್ವೀಕಾರ.

ಹೆಬ್ರಿ: ಎಸ್.ಆರ್ ಪಬ್ಲಿಕ್ ಸ್ಕೂಲ್ ಹಾಗೂ ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025-26 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಆಚಾರ್ಯ, ಕೋಓರ್ಡಿನೇಟರ್ ಅಕ್ಷಿತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಪುಂಡಲೀಕ ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿ ನಾಯಕನಾಗಿ ನಿತೀನ್ ಗೌಡ ಆರ್ 10ನೇ ತರಗತಿ, ವಿದ್ಯಾರ್ಥಿ ನಾಯಕಿಯಾಗಿ ಸಿಂಚನಾ ಎಸ್ ಶೆಟ್ಟಿ 10ನೇ ತರಗತಿ, ಸಹ ನಾಯಕನಾಗಿ ದೀಪಕ್ ಬಿ.ಎಸ್ 10ನೇ ತರಗತಿ, ಆರೋಗ್ಯ ಮಂತ್ರಿಯಾಗಿ ಎಸ್.ಜಿ.ತೇಜಸ್ 10ನೇ ತರಗತಿ, ಶಿಸ್ತಿನ ಮಂತ್ರಿಯಾಗಿ ಯಶವಂತ್ ಎಲ್.ನಾಯ್ಕ್ 9ನೇ ತರಗತಿ ಮತ್ತು ಪಂಚಮಿ ಆರ್ ಶೆಟ್ಟಿ 10ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ಸುಮಂತ್ ವಿ ಎಚ್ 9ನೇ ತರಗತಿ ಮತ್ತು ಸಮೃದ್ಧಿ ಶೆಟ್ಟಿ 9ನೇ ತರಗತಿ, ಕ್ರೀಡಾ ಮಂತ್ರಿಯಾಗಿ ವರ್ಷಾ ಎಂ ಪೂಜಾರಿ 10ನೇ ತರಗತಿ ಮತ್ತು ಐಶ್ವರ್ಯ ಎಸ್ ನಾಯ್ಕ್ 10ನೇ ತರಗತಿ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಜಾಹ್ನವಿ ಕಾರ್ಯಕ್ರಮ ನಿರೂಪಿಸಿ, ನಿರೀಕ್ಷಾ ಸ್ವಾಗತಿಸಿ, ಋತ್ವಿ ಶೆಟ್ಟಿ ವಂದಿಸಿದರು.