ಹೆಬ್ರಿ: ಪತ್ರಿಕೆಗಳು ಪ್ರಜ್ಞಾವಂತ ಸಮಾಜದ ಜೀವನಾಡಿ ಇದ್ದಂತೆ. ಸುದ್ದಿಗಳ ಮೂಲಕ ಪತ್ರಿಕೆಗಳು ಜನರಿಗೆ ಜ್ಞಾನ ಮತ್ತು ಅರಿವನ್ನು ನೀಡುತ್ತವೆ. ನಿರಂತರವಾಗಿ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಾಗ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸುಲಭವಾಗುತ್ತದೆ ಎಂದು ಪತ್ರಕರ್ತ,ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಹೆಬ್ರಿ ಉದಯಕುಮಾರ್ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾವಿಭಾಗದ ಅಕ್ಷರ ಸಾಹಿತ್ಯ ಸಂಘ ನೇತೃತ್ವದಲ್ಲಿ ಜೇಸಿಐ ಹೆಬ್ರಿ ಹಾಗೂ ಚಾಣಕ್ಯ ಶಿಕ್ಷಣ ಸಂಸ್ಥೆ ಹೆಬ್ರಿ ಸಹಭಾಗಿತ್ವದಲ್ಲಿ ನಡೆದ ಅಕ್ಷರ ಯಾನ ಪತ್ರಿಕಾ ರಂಗದ ಪರಿಚಯ ಮತ್ತು ವರದಿ ತಯಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಸಾಹಿತ್ಯ ಸಂಘಗಳ ಮೂಲಕ ವಿದ್ಯಾರ್ಥಿಗಳಿಗೆ ಸಾಹಿತ್ಯದ ಅರಿವಿನ ಜೊತೆಗೆ ಪ್ರಸ್ತುತ ವಿಷಯಗಳ ಬಗ್ಗೆ ಮಾಹಿತಿ ಮತ್ತು ತರಬೇತಿ ಅಗತ್ಯ ಎಂದು ಹೆಬ್ರಿ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ದಿವಾಕರ ಮರಕಾಲ ಎಸ್ ಹೇಳಿದರು.
ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ವಿಜಯೇಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಜೇಸಿಐ ಅಧ್ಯಕ್ಷೆ ಸೋನಿ ಪಿ. ಶೆಟ್ಟಿ, ಅಕ್ಷರ ಸಾಹಿತ್ಯ ಸಂಘದ ಅಧ್ಯಕ್ಷೆ ರಕ್ಷಿತಾ, ಕಾರ್ಯದರ್ಶಿ ಸಂಜನಾ ಉಪಸ್ಥಿತರಿದ್ದರು. ಅಕ್ಷರ ಸಾಹಿತ್ಯ ಸಂಘದ ಮಾರ್ಗದರ್ಶಕ ಶಿಕ್ಷಕ ಮಂಜುನಾಥ ಕುಲಾಲ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.












