ಹೆಬ್ರಿ: ಏಣಿಯಿಂದ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ್ಯು: ರಜೆಯಲ್ಲಿ ಕೆಲಸ ಮಾಡಿ ಮನೆಗೆ ಆಧಾರಸ್ತಂಭವಾಗಿದ್ದ ವಿದ್ಯಾರ್ಥಿ.!

ಉಡುಪಿ: ಏಣಿಯಿಂದ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಹೆಬ್ರಿ ಹುತುರ್ಕೆ ಎಂಬಲ್ಲಿ ನಡೆದಿದೆ.
ಹೆಬ್ರಿ ತಾಲೂಕಿನ ಬೇಳಂಜೆ ನಿವಾಸಿ ಸಾತ್ವಿಕ್ ಮೃತದುರ್ದೈವಿ. ಈತ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ರಜೆಯಲ್ಲಿ ತನ್ನ ವಿದ್ಯಾಭ್ಯಾಸಕ್ಕೂ, ಮನೆಯ ಖರ್ಚಿಗೂ ಸಹಾಯವಾಗಲಿ ಎಂಬ ಉದ್ದೇಶದಿಂದ ಕೆಲಸಕ್ಕೆ ಹೋಗಿದ್ದರು. ಆದರೆ ಹೆಬ್ರಿ ಹುತುರ್ಕೆ ಎಂಬಲ್ಲಿ ಕೆಲಸ ಮಾಡುವಾಗ ಏಣಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಈತ ಕೇವಲ ವಿದ್ಯಾರ್ಥಿ ಮಾತ್ರವಲ್ಲ, ಮನೆಯ ಆಧಾರವಾಗಿದ್ದನು. ಸಾತ್ವಿಕ್ ಗೆ ಕೃಷಿಯ ಬಗ್ಗೆ ಅರಿವು ಇತ್ತು. ಮೊನ್ನೆಯಷ್ಟೆ ಪಿಯುಸಿ ಪರೀಕ್ಷೆ ಮುಗಿಸಿದ್ದ. ಮುಂದಿನ ಹಂತ ಡಿಗ್ರಿ ವಿದ್ಯಾಭ್ಯಾಸ. ಅದಕ್ಕಾಗಿ ಹಣ ಬೇಕು, ಮನೆಯವರಿಗೂ ಕೈಲಾದ ಸಹಾಯ ಮಾಡಬೇಕು ಎಂಬ ದೃಷ್ಟಿಯಿಂದ ರಜೆಯಲ್ಲಿ ಕೆಲಸಕ್ಕೆ ಹೋಗಿದ್ದ. ಕೆಲಸಕ್ಕೆ ಹೋದವನು ಮನೆಗೆ ಮರಳಿ ಬಾರದೆ ಒಂದು ದುರ್ಘಟನೆಯಲ್ಲಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.