ಹೆಬ್ರಿ: ಕಾರು ಚಾಲಕನೊಬ್ಬ ಮನೆಯ ಮರದ ಜಂತಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿಯ ನಾಡ್ಪಾಲು ಸೀತಾನದಿ ಎಂಬಲ್ಲಿ ಡಿ. 2ರಂದು ನಡೆದಿದೆ.
ಮೂಲತಃ ಕೇರಳದವರಾದ ಪ್ರಸ್ತುತ ನಾಡ್ಪಾಲು ಗ್ರಾಮದ ಸೀತಾನದಿ ಎಂಬಲ್ಲಿ ನೆಲೆಸಿರುವ ಕಾರು ಚಾಲಕ ಜೋಸೆಫ್ (54) ಎಂಬವರು ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೋಸೆಫ್ ಹೆಬ್ರಿಯಲ್ಲಿ ಗಣ್ಯರಿಗೆ ಕಾರು ಚಾಲಕರಾಗಿ ದುಡಿಯುತ್ತಿದ್ದರು. ಈಚೆಗೆ ಜೋಸೆಫ್ ವಿಪರೀತ ಕುಡಿತದ ಚಟಕ್ಕೆ ಬಿದ್ದುದ್ದು, ಇದರಿಂದಲೇ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.