ಹೆಬ್ರಿ: ನದಿಯಲ್ಲಿ ಮುಳುಗಿ ಯುವಕ ಮೃತ್ಯು 

ಹೆಬ್ರಿ: ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕನೋರ್ವ ನೀರಿನಲ್ಲಿ‌ ಮುಳುಗಿ ಮೃತಪಟ್ಟ ಘಟನೆ ಹೆಬ್ರಿ ಮುದ್ರಾಡಿ ಗ್ರಾಮದ ಕಬ್ಬಿನಾಲೆ ಎಂಬಲ್ಲಿ ಇಂದು ಸಂಜೆ ನಡೆದಿದೆ.

ಮುನಿಯಾಲು ನಿವಾಸಿ 25ವರ್ಷದ ಪವನ್ ಮೃತದುರ್ದೈವಿ. ಈತ ಇಂದು ಸಂಜೆ ಸ್ಥಳೀಯರ ಜೊತೆಗೆ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದನು. ಈ ವೇಳೆ ನೀರಿನ ಸೆಳೆತಕ್ಕೆ ಪವನ್ ಕೊಚ್ಚಿಹೋಗಿದ್ದು, ಸುಮಾರು 200 ಮೀ ದೂರದಲ್ಲಿ ಆತನ ಶವ ಪತ್ತೆಯಾಗಿದೆ.