ಮಣಿಪಾಲ: ಕೆ.ಕೆ.ಹೆಬ್ಬಾರರ ಜನ್ಮದಿನದ ಅಂಗವಾಗಿ ಪ್ರಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

ಮಣಿಪಾಲ: ಭಾರತದ ಆಧುನಿಕ ಕಲಾವಿದರಲ್ಲಿ ಒಬ್ಬರಾದ ಕೆ.ಕೆ.ಹೆಬ್ಬಾರರ ಜನ್ಮದಿನದ ಅಂಗವಾಗಿ, ಹೆಬ್ಬಾರ್ ಗ್ಯಾಲರಿ ಮತ್ತು ಆರ್ಟ್ ಸೆಂಟರ್ (ಎಚ್‌ಜಿಎಸಿ) ಜೂನ್ 15 ರಂದು ಬುಧವಾರ ಸಂಜೆ 6 ಗಂಟೆಗೆ ಮಣಿಪಾಲ್ ಸೆಂಟರ್ ಫಾರ್ ಹ್ಯುಮಾನಿಟೀಸ್ ನ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ‘ಚಕ್ರವ್ಯೂಹ್’
ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದೆ.

ಉಡುಪಿಯ ಯಕ್ಷಗಾನ ಕೇಂದ್ರದ ಖ್ಯಾತ ಗುರು ಸಂಜೀವ್ ಸುವರ್ಣರವರು ಈ ಯಕ್ಷಗಾನವನ್ನು ನಿರ್ದೇಶಿಸಿದ್ದು, ಮಣಿಪಾಲದಲ್ಲಿ ಪ್ರಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಬಯಲಾಟ ನಡೆಯಲಿದೆ. ಬಹುತೇಕ ಕನ್ನಡ ಅಥವಾ ತುಳು ಭಾಷೆಯಲ್ಲಿ ನಡೆಯುವ ಪ್ರದರ್ಶನವು ಅನ್ಯ ಭಾಷೆ ಮಾತನಾಡುವ ಜನರಿಗೂ ತಲುಪಲಿ ಮತ್ತು ಯಕ್ಷಗಾನದ ಗರಿಮೆ ಇತರರಿಗೂ ಗೊತ್ತಾಗಲಿ ಎನ್ನುವ ನಿಟ್ಟಿನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಇತರ ಭಾಷೆಯಲ್ಲಿಯೂ ಆಡಿಸಲಾಗುತ್ತಿದೆ ಎಂದು ಯಕ್ಷಗಾನ ಕೇಂದ್ರವು ತಿಳಿಸಿದೆ.

ಬುಧವಾರದಂದು ನಡೆಯುವ ಯಕ್ಷಗಾನಕ್ಕೆ ಪ್ರವೇಶ ಉಚಿತವಾಗಿರುತ್ತದೆ.