ಕರಾವಳಿಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ: ಹವಾಮಾನ ಇಲಾಖೆ

ಕರಾವಳಿ: ಮುಂದಿನ ಮೂರು ದಿನಗಳಲ್ಲಿ ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿಯನ್ನು ಹವಾಮಾನ  ಇಲಾಖೆ ತಿಳಿಸಿದ್ದು, ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ರಾಜ್ಯದಲ್ಲಿ ಈಗಾಗಲೇ ಮುಂಗಾರು ಕ್ಷೀಣಿಸಿದ್ದು ಮಲೆನಾಡಿನಲ್ಲೂ ಮಳೆ ಕೊರತೆ ಉಂಟಾಗಿದೆ.ಇಲಾಖಾ ವರದಿಯ ಪ್ರಕಾರ  ಇನ್ನಾದರೂ ಮುಂಗಾರಿನ ಪ್ರಭಾವ ಜಾಸ್ತಿಯಾಗಲಿದೆಯಾ ಎನ್ನುವ ನಿರೀಕ್ಷೆ ಕರಾವಳಿ ಜನರಲ್ಲೂ  ಹುಟ್ಟಿದೆ.