ಕರಾವಳಿಯಲ್ಲಿ ಮತ್ತೆ ಅತ್ಯಾಧಿಕ ಮಳೆಯ ಮುನ್ಸೂಚನೆ: ಪ್ರಕ್ಷುಬ್ದ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ

ಉಡುಪಿ: ಮುಂದಿನ 24 ಗಂಟೆಗಳಲ್ಲಿ ಮತ್ತು ನಂತರದ ನಾಲ್ಕು ದಿನಗಳವರೆಗೆ ಕರ್ನಾಟಕ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಜುಲೈ 16 ರಂದು 115.6 ಮಿಮೀ ನಿಂದ 204.4 ಮಿಮೀ ವರೆಗೆ ಮಳೆಯಾಗುವ ನಿರೀಕ್ಷೆಯಿದೆ. ಜುಲೈ 17 ರಿಂದ 20ರ ವರೆಗೆ ಕರಾವಳಿ ಭಾಗದಲ್ಲಿ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ. ಕಾರವಾರದಿಂದ ಮಂಗಳೂರಿನವರೆಗಿನ ಸಮುದ್ರವೂ ಪ್ರಕ್ಷುಬ್ದವಾಗಲಿದ್ದು, 3.5 ರಿಂದ 4.6 ಮೀಟರ್ ಎತ್ತರದ ಅಲೆಗಳು ಕಾಣಿಸಿಕೊಳ್ಳಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರೈತರು ಕೃಷಿ ಚಟುವಟಿಕೆಗಳನ್ನು ಮಾಡುವ ಸಂದರ್ಭದಲ್ಲಿ ಎಚ್ಚರ ವಹಿಸಲು ಸೂಚಿಸಿದೆ.