ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ವತಿಯಿಂದ ಆರೋಗ್ಯಕರ ವೃದ್ಧಾಪ್ಯ ಜಾಗೃತಿ ಶಿಬಿರ

ಉಡುಪಿ: ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ, ಉಡುಪಿ ಘಟಕದ ಮಾಸಿಕ ಸಭೆಯಲ್ಲಿ ಆರೋಗ್ಯಕರ ವೃದ್ಧಾಪ್ಯ ಜಾಗೃತಿ ಶಿಬಿರವನ್ನು ಮಣಿಪಾಲದ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್, ಡಿಪಾರ್ಟಮೆಂಟ್ ಆಫ್ ಆಕ್ಯುಪೇಶನಲ್ ಥೆರಪಿ ಸಹಯೋಗದಲ್ಲಿ ಜ. 24 ರಂದು ಸಿಂಡಿಕೇಟ್ ಟವರ್ಸ್ ನಲ್ಲಿ ಆಯೋಜಿಸಲಾಗಿತ್ತು.

ಕುಮಾರಿ ಪೂರ್ವ ಹಾಗೂ ತಂಡದವರು ವೃದ್ಧಾಪ್ಯ ಜಾಗೃತಿ, ಸ್ಮರಣ ಶಕ್ತಿ, ಸಂಧಿವಾತ ಸಮಸ್ಯೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

ನಂತರ ಸದಸ್ಯರಿಗೆ ಸ್ಕ್ರೀನಿಂಗ್ ಪರೀಕ್ಷೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ 75 ವಸಂತ ಗಳನ್ನು ಪೂರೈಸಿ ದ ಕೆ. ಕೃಷ್ಣ ಕಾಮತ್ ಮತ್ತು ಜಿ ದಾಮೋದರ ರಾವ್ ಇವರನ್ನು ಸನ್ಮಾನಿಸಲಾಯಿತು.
ಘಟಕದ ಅಧ್ಯಕ್ಷ ಪ್ರದೀಪ ಆರ್ ಭಕ್ತ, ಪದಾಧಿಕಾರಿ ಗಳು, ಸದಸ್ಯರು ಉಪಸ್ಥಿತರಿದ್ದರು.

ಕೇಂದ್ರೀಯ ಸಮಿತಿ ಸದಸ್ಯ ಮೋಹನ್ ದಾಸ್ ನಾಯಕ್ ಸಂಘದ ಚಟುವಟಿಕೆಗಳ ವರದಿಯನ್ನು ಪ್ರಸ್ತುತ ಪಡಿಸಿದರು.

ಪ್ರಾದೇಶಿಕ ಕಾರ್ಯದರ್ಶಿ ಸುಧೀಂದ್ರ ಭಂಡಾರಿ ಸ್ವಾಗತಿಸಿ ವಂದಿಸಿದರು. ಮಾರುತಿ ಪ್ರಭು ನಿರೂಪಿಸಿದರು.