ಕಾಪು: ಶಿರ್ವ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಕಾಪು ಇದರ ಆಶ್ರಯದಲ್ಲಿ ಆರೋಗ್ಯ ಮಾಹಿತಿ ಹಾಗೂ ತಪಾಸಣಾ ಕಾರ್ಯಕ್ರಮ ಹಾಗೂ ಅರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮವು ಚಂದ್ರನಗರ ಬಟರ್ ಫ್ಲೈ ಗೆಸ್ಟ್ ಹೌಸ್ & ಪಾರ್ಟಿ ಹಾಲ್ ನ ಸಭಾಂಗಣದಲ್ಲಿ ಸಮಾಜ ಸೇವಕ ಫಾರೂಕ್ ಚಂದ್ರನಗರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯ ಕಾರ್ಡ್ ನೋಂದಣಿ ಮಾಡಲಾಯಿತು.
ಈ ಸಂದರ್ಭದಲ್ಲಿ ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ಸಮಾಜ ಸೇವಕ ದಿವಾಕರ.ಬಿ.ಶೆಟ್ಟಿ ಕಳತ್ತೂರು,ಕಾಪು ಸಮಾಜ ಸೇವಾ ವೇದಿಕೆ ಸಂಚಾಲಕ ದಿವಾಕರ.ಡಿ.ಶೆಟ್ಟಿ ಕಳತ್ತೂರು, ಐ.ಸಿ.ಟಿ.ಸಿ ವಿಭಾಗ ಆಪ್ತ ಸಮಾಲೋಚಕಿ ಶ್ರೀಮತಿ ವಸಂತಿ, ಪ್ರಯೋಗ ತಂತ್ರಜ್ಞ ಬಸಪ್ಪ ಎಂ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಧಾವತಿ, ಆಶಾ ಕಾರ್ಯಕರ್ತೆ ಸುಜಾತ, ಪಿ.ಎಂ.ಜೆ.ಯು ಜ್ಯೋತಿ, ಮಸ್ಜಿದ್ ಈ ನೂರ್ ಮಸ್ಜಿದ್ ಅಧ್ಯಕ್ಷ ಆಲಿಯಬ್ಬ ಕೊರಂಟಿಕಟ್ಟೆ ಉಪಸ್ಥಿತರಿದ್ದರು. ಕಳತ್ತೂರು ಗ್ರಾಮದ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡರು.